Wednesday, May 22, 2024
Homeಸುದ್ದಿಶಿರ್ವ: ವಿಶ್ವ ಮಹಿಳಾ ದಿನಾಚರಣೆ; ಲಯನ್ಸ್ ಕ್ಲಬ್ ಬಂಟಕಲ್ ವತಿಯಿಂದ ಮಹಿಳಾ ಮೀನುಗಾರರು ಹಾಗೂ...

ಶಿರ್ವ: ವಿಶ್ವ ಮಹಿಳಾ ದಿನಾಚರಣೆ; ಲಯನ್ಸ್ ಕ್ಲಬ್ ಬಂಟಕಲ್ ವತಿಯಿಂದ ಮಹಿಳಾ ಮೀನುಗಾರರು ಹಾಗೂ ಪಂಚಾಯತ್ ಮಹಿಳಾ ಸಿಬ್ಬಂಧಿಗಳಿಗೆ ಗೌರವಾರ್ಪಣೆ

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಶಿರ್ವ ಮಹಿಳಾ ಮೀನುಮಾರುಕಟ್ಟೆಯಲ್ಲಿರುವ 25 ಮೀನು ಮಾರಾಟಗಾರರನ್ನು ಹಾಗೂ ಶಿರ್ವ ಪಂಚಾಯತ್ ಮಹಿಳಾ ಸಿಬ್ಬಂಧಿಯವರನ್ನು ಲಯನ್ಸ್ ಕ್ಲಬ್ ಬಂಟಕಲ್ಲು ಬಿ.ಸಿ ರೋಡು ನ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ, ಹೂ ನೀಡಿ ಗೌರವಿಸಲಾಯಿತು. ಶಿರ್ವ, ಪಂಜಿಮಾರು, ಬಂಟಕಲ್ಲಿನಲ್ಲಿ ಮೀನು ಮಾರಾಟ ಮಾಡುವ 25 ಮಹಿಳಾ ಮೀನು ಮಾರಟಗಾರರನ್ನು ಗೌರವಿಸಲಾಯಿತು.

ಲಯನ್ಸ್ ಕ್ಲಬ್ ಬಂಟಕಲ್ಲು – ಬಿ.ಸಿ ರೋಡ್ ನ ಪ್ರಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ಲ. ಕೆ ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಮಹಿಳಾ ದಿನಾಚರಣೆ ಆಚರಣೆ ಹಾಗೂ ಲಯನ್ಸ್ ಈ ಕಾರ್ಯಕ್ರಮದ ಬಗ್ಗೆ ತಿಳಿಸಿ ಸರ್ವರನ್ನೂ ಸ್ವಾಗತಿಸಿದರು.

ಮುಖ್ಯ ಅತಿಥಿಯಾಗಿದ್ದ ಶಿರ್ವ ಗ್ರಾ.ಪಂಚಾಯತ್ ನ ಅಭಿವೃದ್ದಿ ಅಧಿಕಾರಿ ಶ್ರೀ ಅನಂತ ಪದ್ಮನಾಭ ನಾಯಕ್ ರವರು ಮಹಿಳಾ ದಿನಾಚರಣೆಯ ಮಹತ್ವ ಹಾಗೂ ಸಮಾಜದಲ್ಲಿ ಮಹಿಳೆಯರಿಗೆ ಇರುವ ಗೌರವ, ಅವರ ಸೇವೆ, ಸಾಧನೆಗಳ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಚಂದ್ರಮಣಿ ಹಾಗೂ ಗ್ರಾ.ಪಂ ಸದಸ್ಯೆ ಶ್ರೀಮತಿ ವೈಲೆಟ್ ಕಸ್ತಲಿನೋರವರು ಮೀನು ಮಾರಾಟಗಾರರಿಗೆ ಲಯನ್ಸ್ ಕ್ಲಬ್ ಪರರವಾಗಿ ಶಾಲು ಹೊದಿಸಿ, ಹೂ, ನೀಡಿ ಗೌರವಿಸಿದರು.

ತದ ನಂತರ ಪಂಚಾಯತ್ ಕಛೇರಿಗೆ ತೆರಳಿ ಪಂಚಾಯತ್ ಮಹಿಳಾ ಸಿಬ್ಬಂಧಿಯವರನ್ನೂ ಗೌರವಿಸಲಾಯಿತು.
ಬಂಟಕಲ್ಲು ಬಿ.ಸಿ ರೋಡ್ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ವಿಲ್ಫ್ರಡ್ ಪಿಂಟೊ ರವರು ಎಲ್ಲರಿಗೂ ಸ್ಮರಣಿಕೆ ನೀಡಿ ಶುಭ ಹಾರೈಸಿದರು.

ಲಯನ್ಸ್ ಕಾರ್ಯದರ್ಶಿ ಲ. ಉಮೇಶ್, ಲ.ವಿಜಯ್ ಧೀರಾಜ್, ಲ. ಸದಾನಂದ ಪೂಜಾರಿ ಲ. ಟೋನಿ, ಲ.ಅರುಣ್ ಮುಂತಾದವರು ಉಪಸ್ಥಿತರಿದ್ದರು

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News