Monday, May 27, 2024
Homeಸುದ್ದಿರಾಜ್ಯ‘ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಅನುಭವಿಸಿದೆ’; ಜೀವನದ ಕಹಿ ಸತ್ಯ ಬಿಚ್ಚಿಟ್ಟ ನಟಿ ಖುಷ್ಬೂ

‘ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಅನುಭವಿಸಿದೆ’; ಜೀವನದ ಕಹಿ ಸತ್ಯ ಬಿಚ್ಚಿಟ್ಟ ನಟಿ ಖುಷ್ಬೂ

ನಟಿ ಖುಷ್ಬೂ ಸುಂದರ್ ಅವರು ಚಿತ್ರರಂಗಕ್ಕಿಂತ ರಾಜಕೀಯದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಗೆಬಗೆಯ ಪೋಸ್ಟ್ ಹಾಕುವ ಅವರು ಎಲ್ಲ ವಿಚಾರಗಳನ್ನು ನೇರ ನುಡಿಗಳಿಂದ ಹೇಳುತ್ತಾರೆ. ಅವರು ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಆಗಿ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಅವರು ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಇದರ ಜೊತೆ ಅನೇಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಖುಷ್ಬೂ ಅವರು ಎಳೆಎಳೆಯಾಗಿ ತಮ್ಮ ಬಾಲ್ಯದ ದಿನಗಳನ್ನು ಹೇಳಿಕೊಂಡಿದ್ದಾರೆ. ‘ಮಗುವಿನ ಮೇಲೆ ದೌರ್ಜನ್ಯ ಆದರೆ ಆ ಗಾಯ ಜೀವನ ಪರ್ಯಂತ ಹಾಗೆಯೇ ಇರುತ್ತದೆ. ಅದು ಹುಡುಗಿ ಆಗಿರಬಹುದು, ಹುಡುಗನೇ ಆಗಿರಬಹುದು. ನನ್ನ ತಾಯಿ ಸಾಕಷ್ಟು ನಿಂದನೆಗೆ ಒಳಗಾಗುತ್ತಿದ್ದರು. ತನ್ನ ಹೆಂಡತಿ ಹಾಗೂ ಮಕ್ಕಳನ್ನು ಹೊಡೆಯುವುದು, ಏಕೈಕ ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಆ ವ್ಯಕ್ತಿ (ತಂದೆ) ಭಾವಿಸಿದ್ದ. ನನ್ನ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದಾಗ ನನಗೆ ಕೇವಲ 8 ವರ್ಷ ವಯಸ್ಸು. 15 ವರ್ಷ ತುಂಬಿದ ಬಳಿಕ ತಂದೆಯ ವಿರುದ್ಧ ಮಾತನಾಡುವುದನ್ನು ಕಲಿತೆ’ ಎಂದಿದ್ದಾರೆ ಖುಷ್ಬೂ.

‘ನಾನು ಒಂದು ನಿಲುವು ತೆಗೆದುಕೊಳ್ಳಬೇಕಾಗಿತ್ತು. ಒಂದೊಮ್ಮೆ ನಾನು ಇದನ್ನು ಹೇಳಿದರೆ ಕುಟುಂಬದ ಇತರ ಸದಸ್ಯರು ನಿಂದನೆಗೆ ಒಳಗಾಗುತ್ತಾರೆ ಎಂಬ ಭಯವು ನನ್ನ ಬಾಯಿಯನ್ನು ಹಲವು ವರ್ಷಗಳವರೆಗೆ ಮುಚ್ಚಿಸಿತು. ನನ್ನ ತಾಯಿ ನನ್ನನ್ನು ನಂಬದಿರಬಹುದು ಎಂದು ಅನಿಸುತ್ತಿತ್ತು. ಏಕೆಂದರೆ ಏನೇ ಆದರೂ ತನ್ನ ಗಂಡ ದೇವರು ಎನ್ನುವ ಮನಸ್ಥಿತಿ ಅವರದ್ದು. 15ನೇ ವಯಸ್ಸಿಗೆ ನಾನು ತಿರುಗಿಬಿದ್ದೆ’ ಎಂದು ಅವರು ಹೇಳಿದ್ದಾರೆ.

ಖುಷ್ಬೂ ಅವರಿಗೆ ನಂತರದ ದಿನಗಳಲ್ಲಿ ಹೆಚ್ಚು ಧೈರ್ಯ ಬಂತು. ತಪ್ಪಿನ ವಿರುದ್ಧ ಅವರು ಸಿಡಿದೆದ್ದರು. ಖುಷ್ಬೂ ಅವರು ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ಸು ಪಡೆದರು. ಕನ್ನಡದ ಮೇಲೆ, ಕನ್ನಡ ಚಿತ್ರರಂಗದ ಬಗ್ಗೆ ಅವರಿಗೆ ಈಗಲೂ ಪ್ರೀತಿ ಇದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News