Wednesday, April 24, 2024
Homeಸುದ್ದಿಕರಾವಳಿಉಡುಪಿ: ಖ್ಯಾತ ಕ್ರಿಕೆಟಿಗ, ಸಿಎ ಮಲ್ಲೇಶ್ ನಿಧನ..!!

ಉಡುಪಿ: ಖ್ಯಾತ ಕ್ರಿಕೆಟಿಗ, ಸಿಎ ಮಲ್ಲೇಶ್ ನಿಧನ..!!

ಉಡುಪಿ: ನಗರದ ಸಿಎ ಉದ್ಯೋಗಿ ಉದ್ಯಾವರದ ಪಿತ್ರೋಡಿಯ
ಮಲ್ಲೇಶ್ (40) ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜನರೊಂದಿಗೆ ಅತ್ಯಂತ ಸ್ನೇಹ ಜೀವಿ ಆಗಿದ್ದ ಅವರು ತಂದೆ ತಾಯಿ, ಸೋದರಿ, ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳು ಸಹಿತ ಅಪಾರ ಬಂಧು ಬಳಗ ಮತ್ತು ಸ್ನೇಹಿತ ವರ್ಗವನ್ನು ಅಗಲಿದ್ದಾರೆ.

ಉಡುಪಿಯ ಬನ್ನಂಜೆಯಲ್ಲಿ ಸಿಎ ಆಫೀಸ್ ನ್ನು ನಡೆಸುತ್ತಿದ್ದ ಅವರು, ಸಿ ಎ ಅಸೋಸಿಯೇಶನ್ ನ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಉದ್ಯಾವರ ಪಿತ್ರೋಡಿಯ ವೆಂಕಟರಮಣ
ಸ್ಪೋರ್ಟ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿದ್ದ ಅವರು ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ನ ರಕ್ತದಾನ ಸಂಘದ ಸದಸ್ಯರಾಗಿ ಹಲವು ಬಾರಿ ರಕ್ತದಾನ ಮಾಡುವ ಮೂಲಕ ಹಲವಾರು ಜೀವಗಳನ್ನು ರಕ್ಷಿಸುವಲ್ಲಿ ಸಹಕಾರಿಯಾಗಿದ್ದರು.

ಅತ್ಯಂತ ಸರಳ ಸ್ವಭಾವದವರಾದ ಮಲ್ಲೇಶ್ ವೆಂಕಟರಮಣ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾಗಿ ಹಲವು ವರ್ಷ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಮಟ್ಟದ ಮಂದ್ಯಾಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದರು.

ವೆಂಕಟರಮಣ ಕ್ರಿಕೆಟರ್ಸ್ ಇವರ ನೇತೃತ್ವದಲ್ಲಿ ನಡೆದ ಹಲವು ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಕೂಟದ ಯಶಸ್ವಿಯಲ್ಲಿ ಇವರ ಸೇವೆ ಅತ್ಯಂತ ವಿಶೇಷವಾದದ್ದು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News