Saturday, April 20, 2024
Homeಸುದ್ದಿರಾಜ್ಯಹಸಮಣೆ ಏರಲು ಸಜ್ಜಾದ 'ಗೂಗ್ಲಿ' ನಟಿ ಕೃತಿ ಕರಬಂಧ

ಹಸಮಣೆ ಏರಲು ಸಜ್ಜಾದ ‘ಗೂಗ್ಲಿ’ ನಟಿ ಕೃತಿ ಕರಬಂಧ

ಬೆಂಗಳೂರು: ಯಶ್‌ ಅಭಿನಯದ ಗೂಗ್ಲಿ ಸಿನಿಮಾದ ಮೂಲಕ ಮನೆಮಾತಾಗಿದ್ದ ಕೃತಿ ಕರಬಂಧ ಅವರು ಇದೀಗ ಪುಲ್ಕಿತ್ ಸಾಮ್ರಾಟ್ ಅವರೊಂದಿಗೆ ಹಸಮಣೆ ಏರಲು ಸಜ್ಜಾಗಿದ್ದಾರೆ.

ಕೃತಿ ಕರಬಂಧ ಅವರು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಗೂಗ್ಲಿ ಸಿನಿಮಾದಲ್ಲಿ ಕೃತಿ ಕರಬಂಧ ಮೋಡಿ ಮಾಡಿದ್ದು, ಇದೀಗ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತ ಅಲ್ಲಿಯೇ ಸೆಟಲ್ ಆಗಿದ್ದಾರೆ.

ಇನ್ನು ಪುಲ್ಕಿತ್ ಮತ್ತು ಕೃತಿ ಈ ವರ್ಷದ ಅಂತ್ಯದೊಳಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲಿಯೇ ಈ ಕುರಿತು ಅಧಿಕೃತ ಅಪ್‌ಡೇಟ್ ಕೂಡ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News