Tuesday, June 18, 2024
Homeಸುದ್ದಿಕರಾವಳಿಬೆಳ್ಳಾರೆ ಪ್ರವೀಣ್ ನೆಟ್ಟಾರು ಪ್ರಕರಣ : ಎನ್ಐಎ ಬಲೆಗೆ ಬಿದ್ದ ಮಡಿಕೇರಿಯ ತುಫೈಲ್..!!

ಬೆಳ್ಳಾರೆ ಪ್ರವೀಣ್ ನೆಟ್ಟಾರು ಪ್ರಕರಣ : ಎನ್ಐಎ ಬಲೆಗೆ ಬಿದ್ದ ಮಡಿಕೇರಿಯ ತುಫೈಲ್..!!

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಉಂಟು ಮಾಡಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೋರ್ವ ಆರೋಪಿಯ ಬಂಧನವಾಗಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬೆಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿದೆ.

ಬಂಧಿತ ಆರೋಪಿಯನ್ನು ಮಡಿಕೇರಿ ಮೂಲದ ತುಫೈಲ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಆತನನ್ನು ಸೆರೆ ಹಿಡಿಯಲಾಗಿದೆ ಎಂದು ವರದಿ ತಿಳಿಸಿದೆ.

ತುಫೈಲ್‌ ಕುರಿತು ಮಾಹಿತಿ ನೀಡುವವರಿಗೆ ತಲಾ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್.ಐ.ಎ ಘೋಷಣೆ ಮಾಡಿತ್ತು. ಅಷ್ಟೇ ಅಲ್ಲದೇ ಆರೋಪಿಗಳ ವಿರುದ್ಧ ಲುಕೌಟ್ ನೋಟೀಸ್ ಜಾರಿ ಮಾಡಲಾಗಿತ್ತು.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಬಗ್ಗೆ ತನಿಖೆ ನಡೆಸಿದ್ದ ಎನ್ ಐಎ ಆರೋಪ ಪಟ್ಟಿ ಸಲ್ಲಿಸಿತ್ತು. 2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ತನ್ನ ಅಜೆಂಡಾವನ್ನು ಬಲಪಡಿಸಲು ಸಮಾಜದಲ್ಲಿ ಅಶಾಂತಿ, ಭಯ ಹಾಗೂ ಕೋಮು ದ್ವೇಷವನ್ನು ಬಿತ್ತುವ ತನ್ನ ಉದ್ದೇಶದ ಭಾಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ), ತನ್ನ ‘ಶತ್ರುಗಳೆಂದು ಗ್ರಹಿಸಿದವರು’ ಮತ್ತು ಗುರಿಗಳನ್ನು ಕೊಲ್ಲುವ ಕಾರ್ಯಗಳನ್ನು ನಡೆಸುವ ಸಲುವಾಗಿಯೇ ಸರ್ವೀಸ್ ಟೀಮ್ಸ್ ಅಥವಾ ಕಿಲ್ಲರ್ ಸ್ಕ್ವಾಡ್‌ ಗಳೆಂದು ಕರೆಯುವ ರಹಸ್ಯ ತಂಡಗಳನ್ನು ರಚಿಸಿದೆ ಎಂದು ತನಿಖೆಯಿಂದ ಬಯಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News