Friday, March 1, 2024
Homeಸುದ್ದಿಕರಾವಳಿಬೈಂದೂರು: ಸಾಲಬಾಧೆ ಹಾಗೂ ಪತ್ನಿಯ ಅನಾರೋಗ್ಯದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

ಬೈಂದೂರು: ಸಾಲಬಾಧೆ ಹಾಗೂ ಪತ್ನಿಯ ಅನಾರೋಗ್ಯದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆ

ಉಪ್ಪುಂದ: ಸಾಲಬಾಧೆ ಹಾಗೂ ಪತ್ನಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಮನನೊಂದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರಿನಲ್ಲಿ ನಡೆದಿದೆ.

ಬೈಂದೂರು ತಾಲೂಕು ವಿದ್ಯಾನಗರ ಡಿಗ್ರಿ ಕಾಲೇಜು ಸಮೀಪದ ನಿವಾಸಿ ಗೋಪಾಲ (48) ಆತ್ಮಹತ್ಯೆ ಮಾಡಿಕೊಂಡವರು.

ಅವರು ಹೊಸ ಮನೆಯನ್ನು ನಿರ್ಮಿಸಲು ಪ್ರಾರಂಭಿಸಿದ್ದು, ಹಣದ ಅಡಚಣೆಯಿಂದ ಮನೆ ಕೆಲಸ ನಿಧಾನಕ್ಕೆ ನಡೆದಿದ್ದು, ಮನೆ ನಿರ್ಮಾಣದ ಸಲುವಾಗಿ ಬ್ಯಾಂಕ್‌ ಹಾಗೂ ಸಂಘಗಳಲ್ಲಿ ಸುಮಾರು 7-8 ಲಕ್ಷ ರೂ. ಸಾಲ ಮಾಡಿ, ಮನೆ ನಿರ್ಮಾಣ ಮಾಡುತ್ತಿದ್ದು, ಇನ್ನು ಹೆಚ್ಚಿನ ಹಣ ಬೇಕಾಗಿರುವ ಬಗ್ಗೆ ಪತ್ನಿ ಸುಶೀಲಾ ಅವರಲ್ಲಿ ಪದೇ ಪದೇ ಹೇಳುತ್ತಿದ್ದರು. ಸುಶೀಲಾ ಮೊಗವೀರ ಅವರಿಗೂ ಆರೋಗ್ಯ ಹದಗೆಟ್ಟು, ಹಾಸಿಗೆ ಹಿಡಿದ ಕಾರಣ ಮಾನಸಿಕ ಖನ್ನತೆಗೆ ಒಳಗಾಗಿ ಮದ್ಯಪಾನ ಸಹ ಮಾಡುತ್ತಿದ್ದರು. ಮಾ.2ರಂದು ಬೆಳಗ್ಗೆ ಎದ್ದು ಹೊಸ ಮನೆ ಕೆಲಸದ ಬಗ್ಗೆ ಹೋಗಿದ್ದು ಚಹಾ ಕುಡಿಯಲು ಬೆಳಗ್ಗೆ 8:30 ಗಂಟೆಗೆ ಕರೆಯಲು ಹೋದಾಗ ಹೊಸ ಮನೆಯ ಒಳಗಡೆ ಇರುವ ಟಾಯ್ಲೆಟ್‌ನ ಕಬ್ಬಿಣದ ಜಂತಿಗೆ ಟವೆಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News