Wednesday, April 24, 2024
Homeಸುದ್ದಿಕರಾವಳಿಮಲ್ಪೆ: ಇಸ್ಪೀಟ್ ಅಡ್ಡೆಗೆ ಪೊಲೀಸರಿಂದ ದಾಳಿ; ಸಾವಿರರಾರು ರೂ. ನಗದು ಸಹಿತ ನಾಲ್ವರು ವಶಕ್ಕೆ..!!

ಮಲ್ಪೆ: ಇಸ್ಪೀಟ್ ಅಡ್ಡೆಗೆ ಪೊಲೀಸರಿಂದ ದಾಳಿ; ಸಾವಿರರಾರು ರೂ. ನಗದು ಸಹಿತ ನಾಲ್ವರು ವಶಕ್ಕೆ..!!

ಮಲ್ಪೆ: ಬಾರ್’ನ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು 4 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಲ್ಪೆ ಠಾಣಾ ಪೊಲೀಸರು, ಕೊಡವೂರು ಗ್ರಾಮದ ಬಾರ್ ವೊಂದರ ಹಿಂಬದಿಯ ಸಾರ್ವಜನಿಕ ಸ್ಥಳಕ್ಕೆ ತೆರಳಿ ಇಸ್ಪೀಟು ಜುಗಾರಿ ಆಡುತ್ತಿದ್ದ ರೂಪೇಶ್‌ , ಪ್ರಕಾಶ್, ಜಯರಾಮ್‌, ರಾಜುರನ್ನು ವಶಕ್ಕೆ ಪಡೆದು, ಅವರಿಂದ 9,310 ರೂ. ನಗದು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News