Monday, April 22, 2024
Homeಸುದ್ದಿರಾಜ್ಯಸಾಧುಕೋಕಿಲ 2ನೇ ಇನ್ನಿಂಗ್ಸ್​ ಪ್ರಾರಂಭ : ಸಂಗೀತ ಮಾಂತ್ರಿಕನಿಗೆ ಕಾಂಗ್ರೆಸ್​​ನಲ್ಲಿ ಹೊಸ ಜವಾಬ್ದಾರಿ..!!

ಸಾಧುಕೋಕಿಲ 2ನೇ ಇನ್ನಿಂಗ್ಸ್​ ಪ್ರಾರಂಭ : ಸಂಗೀತ ಮಾಂತ್ರಿಕನಿಗೆ ಕಾಂಗ್ರೆಸ್​​ನಲ್ಲಿ ಹೊಸ ಜವಾಬ್ದಾರಿ..!!

ಮುಂಬರುವ ವಿಧಾನಸಭೆಯ ಚುನಾವಣೆಗಾಗಿ ರಾಜಕಾರಣಿಗಳು ಗಾಳ ಹಾಕಲು ಶುರು ಮಾಡಿದ್ದಾರೆ. ಈಗಾಗಲೇ ಕೆಲವು ರಾಜಕಾರಣಿಗಳು ಅತ್ತಿಂದಿತ್ತ ಇತ್ತಿಂದತ್ತ ಪಕ್ಷ ಪರ್ಯಟನೆ ಮಾಡುತ್ತಿದ್ದಾರೆ. ನಿನ್ನೆ ಆಮ್​ ಆದ್ಮಿ ಪಕ್ಷ ತೊರೆದ ಮಾಜಿ ಐಪಿಎಸ್​ ಅಧಿಕಾರಿ ಭಾಸ್ಕರ್​ ರಾವ್​ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇದೀಗ ಸ್ಯಾಂಡಲ್​ವುಡ್​ ಖ್ಯಾತ ಸಂಗೀತ ನಿರ್ದೇಶಕ, ಹಾಸ್ಯ ನಟ ಸಾಧು ಕೋಕಿಲಾ ಕಾಂಗ್ರೆಸ್​ ಸೇರ್ಪಡೆಗೊಂಡಿದ್ದಾರೆ.

ಸಾಧು ಕೋಕಿಲಾ ಅವರನ್ನು ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಅಧಿಕೃತವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಅವರನ್ನು ಕೆಪಿಸಿಸಿ ಅಧ್ಯಕ್ಷ ಶಾಲು ಹೊದಿಸಿ, ಹೂಗುಚ್ಚ ನೀಡಿ ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.

ಸಾಧು ಕೋಕಿಲಾ ಅವರು ಕಾಂಗ್ರೆಸ್​ ಸೇರಿರುವ ಬಗ್ಗೆ ಡಿಕೆಶಿ ಟ್ವೀಟ್​​ ಕೂಡ ಮಾಡಿದ್ದಾರೆ. ಟ್ವೀಟ್​​ನಲ್ಲಿ ಸಂಗೀತ, ನಿರ್ದೇಶನ, ನಟನೆಯ ಮೂಲಕ ಕನ್ನಡ ನಾಡಿನ ಮನೆಮಾತಾಗಿರುವ ಸಾಧು ಕೋಕಿಲಾ ಅವರು ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ತುಂಬುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News