Thursday, April 25, 2024
Homeಸುದ್ದಿರಾಷ್ಟ್ರೀಯಹತ್ರಾಸ್‌ ದಲಿತ ಯುವತಿಯ ಗ್ಯಾಂಗ್‌ರೇಪ್‌ ಮತ್ತು ಕೊಲೆ ಪ್ರಕರಣ: ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ...!

ಹತ್ರಾಸ್‌ ದಲಿತ ಯುವತಿಯ ಗ್ಯಾಂಗ್‌ರೇಪ್‌ ಮತ್ತು ಕೊಲೆ ಪ್ರಕರಣ: ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ…!

ಉತ್ತರಪ್ರದೇಶ: ಹತ್ರಾಸ್‌ನಲ್ಲಿ 2020ರಲ್ಲಿ ನಡೆದ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಬಂಧ ಗುರುವಾರ ಸ್ಥಳೀಯ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಪ್ರಮುಖ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಉಳಿದ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಪ್ರಮುಖ ಆರೋಪಿ ಸಂದೀಪ್‌(20) ವಿರುದ್ಧ ಅತ್ಯಾಚಾರ ಮತ್ತು ಕೊಲೆ ಆರೋಪ ಸಾಬೀತಾಗಿಲ್ಲ ಎಂದು ಅವನ ಪರ ವಕೀಲ ಮುನ್ನಾ ಸಿಂಗ್‌ ಹೇಳಿದ್ದಾರೆ.

ಉದ್ದೇಶ ಪೂರ್ವಕವಲ್ಲದ ಕೊಲೆ ಆರೋಪದ ಮೇರೆಗೆ ಆತನಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಲಾಗಿದೆ. ಉಳಿದ ಮೂವರು ಆರೋಪಿಗಳಾದ ರವಿ, ಲವ್‌ ಕುಶ್‌ ಮತ್ತು ರಾಮುನನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ದೋಷಮುಕ್ತಗೊಳಿಸಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News