Monday, April 22, 2024
Homeಸುದ್ದಿರಾಜ್ಯಇಬ್ಬರು ಮಕ್ಕಳ ಜತೆ ಹೆಂಡತಿಗೆ ವಿಷ ಕೊಟ್ಟು ಕೊಂದ ಪಾಪಿ ಪತಿ; ತಾನು ಆತ್ಮಹತ್ಯೆಗೆ ಯತ್ನ

ಇಬ್ಬರು ಮಕ್ಕಳ ಜತೆ ಹೆಂಡತಿಗೆ ವಿಷ ಕೊಟ್ಟು ಕೊಂದ ಪಾಪಿ ಪತಿ; ತಾನು ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಹೆಂಡತಿ ಹಾಗೂ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಹಾಕಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಣನಕುಂಟೆಯಲ್ಲಿ ನಡೆದಿದೆ.

ವಿಜಯ (28), ನಿಷಾ (7), ದೀಕ್ಷಾ (5) ಮೃತ ದುರ್ದೈವಿಗಳು.

ಪತಿ ನಾಗೇಂದ್ರ ಈ ಕೃತ್ಯವನ್ನು ಎಸಗಿದ್ದಾನೆ. ವಿಷ ಬೆರೆಸಿದ ಊಟವನ್ನು ತಿಂದ ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿಯೇ ನರಳಾಡಿ ಸಾವನ್ನಪ್ಪಿದ್ದಾರೆ. ಬಳಿಕ ಗಂಡ ನಾಗೇಂದ್ರ ಮೊದಲು ಚಾಕುವಿನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇನ್ನು ಪತಿ ನಾಗೇಶ್​ ಕ್ಯಾನ್ಸರ್​​ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ಸದ್ಯ ಘಟನಾ ಸ್ಥಳಕ್ಕೆ ಕೋಣನಕುಂಟೆ ಪೊಲೀಸ್​​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕೋಣನಕುಂಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತದೇಹಗಳನ್ನು ಕಿಮ್ಸ್ ಗೆ ರವಾನಿಸಲಾಗಿದೆ

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News