Friday, March 29, 2024
Homeಸುದ್ದಿಕರಾವಳಿತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶ : ವ್ಯಕ್ತಿ ಮೃತ್ಯು

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶ : ವ್ಯಕ್ತಿ ಮೃತ್ಯು

ಕುಂದಾಪುರ: ಅಡಿಕೆ ಕೊಯ್ಯಲು ತೆರಳಿದ್ದ ವ್ಯಕ್ತಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಸಮೀಪದ ಕೋಣ್ಕಿ ಎಂಬಲ್ಲಿ ನಡೆದಿದೆ.

ಕೋಣ್ಕಿ ಅಂಗಡಿ ಬೆಟ್ಟು ನಿವಾಸಿ ಭುಜಂಗ ಶೆಟ್ಟಿ (58) ಮೃತ ದುರ್ದೈವಿ.

ಮನೆಯ ತೋಟದ ಅಡಿಕೆ ಕೊಯ್ಯಲು ಹಾಗೂ ಅಡಿಕೆ ಗರಿಗಳನ್ನು ಕತ್ತರಿಸಲು ಭುಜಂಗ ಶೆಟ್ಟಿ ತೆರಳಿದ್ದು, ಉದ್ದದ ಕಬ್ಬಿಣದ ಕೊಕ್ಕೆ ಮೂಲಕ ಕೆಲಸ ಮಾಡುತ್ತಿರುವಾಗ ತೋಟದಲ್ಲಿ ಹಾದು ಹೋದ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News