Thursday, April 25, 2024
Homeಸುದ್ದಿಕರಾವಳಿಕಾರ್ಕಳ: ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ; ವಿದೇಶಕ್ಕೆ ತೆರಳಲು ಸಿದ್ದತೆಯಲ್ಲಿದ್ದ ವ್ಯಕ್ತಿ ಮೃತ್ಯು

ಕಾರ್ಕಳ: ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ; ವಿದೇಶಕ್ಕೆ ತೆರಳಲು ಸಿದ್ದತೆಯಲ್ಲಿದ್ದ ವ್ಯಕ್ತಿ ಮೃತ್ಯು

ಕಾರ್ಕಳ: ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಿರ್ಗಾನ ಗ್ರಾಮದ ಗೊರಟ್ಟಿ ಚರ್ಚ್ ಬಳಿ ಇಂದು ಸಂಜೆ ನಡೆದಿದೆ.

ಮೃತ ಬೈಕ್ ಸವಾರ ಹಿರ್ಗಾನ ಗ್ರಾಮದ ಕಾನಂಗಿ ಹಂಕರಬೆಟ್ಟು ನಿವಾಸಿ ಮನೋಹರ ಪೂಜಾರಿ(43ವ) ಎಂದು ಗುರುತಿಸಲಾಗಿದೆ.

ಮನೋಹರ ಪೂಜಾರಿ ಅವರು ತನ್ನ ಬೈಕಿನಲ್ಲಿ ಇಂದು ಸಂಜೆ ಕಾರ್ಕಳ ಕಡೆಯಿಂದ ಹಿರ್ಗಾನ ಕಡೆಗೆ ಹೋಗುತ್ತಿದ್ದ ವೇಳೆ ಅಜೆಕಾರು ಕಡೆಗೆ ಹೋಗುತ್ತಿದ್ದ ಬಸ್ಸಿಗೆ ಹಿಂದಿನಿಂದ ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಮನೋಹರ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಮೃತ ಮನೋಹರ ಪೂಜಾರಿ ಇನ್ನು ಕೆಲವೇ ದಿನಗಳಲ್ಲಿ ವಿದೇಶಕ್ಕೆ ಹೋಗಲು ಸಿದ್ಧತೆ ನಡೆಸಿದ್ದು, ಅದಕ್ಕಾಗಿ ವೈದ್ಯಕೀಯ ತಪಾಸಣೆಯ ಪ್ರಮಾಣಪತ್ರ ತರಲು ಕಾರ್ಕಳಕ್ಕೆ ಹೋಗಿ ಮನೆಗೆ ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.

ಮನೋಹರ ಅವರ ಪತ್ನಿ ಅನಾರೋಗ್ಯ ಪೀಡಿತರಾಗಿದ್ದು ಅವರ ಚಿಕಿತ್ಸೆಗೆಂದು ಕಳೆದ 8 ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದರು.

ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News