Saturday, April 20, 2024
Homeಸುದ್ದಿಕರಾವಳಿಸಾರ್ವಜನಿಕರ ಬಹು ದಿನದ ಬೇಡಿಕೆ ಈಡೇರಿಕೆ : ಕುಂದಾಪುರ, ಬಾರ್ಕೂರಿನಲ್ಲಿ ರೈಲು ನಿಲುಗಡೆಗೆ ಆದೇಶ

ಸಾರ್ವಜನಿಕರ ಬಹು ದಿನದ ಬೇಡಿಕೆ ಈಡೇರಿಕೆ : ಕುಂದಾಪುರ, ಬಾರ್ಕೂರಿನಲ್ಲಿ ರೈಲು ನಿಲುಗಡೆಗೆ ಆದೇಶ

ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಭಾಗದ ಜನರ ಬೇಡಿಕೆಯನ್ನು ಕೇಂದ್ರ ಸರಕಾರದ ರೈಲ್ವೇ ಇಲಾಖೆ ಈಡೇರಿಸಿದೆ.

ಮಾ.4 ರಿಂದ ಅನ್ವಯವಾಗುವಂತೆ ಕುಂದಾಪುರ ರೈಲು ನಿಲ್ದಾಣದಲ್ಲಿ ನೇತ್ರಾವತಿ ಎಕ್ಸ್‌ಪ್ರೆಸ್‌, ಕಡೂರಿನಲ್ಲಿ ಯಶವಂತಪುರ- ವಾಸ್ಕೋ-ಡಾ-ಗಾಮಾ ಎಕ್ಸ್‌ಪ್ರೆಸ್‌, ಬಾರ್ಕೂರಿನಲ್ಲಿ ಮತ್ಸ್ಯಗಂಧ ಎಕ್ಸ್‌ಪ್ರೆಸ್‌, ಚಿಕ್ಕಮಗಳೂರಿನ ಬೀರೂರಿನಲ್ಲಿ ಯಶವಂತಪುರ-ಬಾರ್ಮೆರ್‌ ರೈಲು ನಿಲುಗಡೆಯಾಗಲಿದೆ.

ಇದು ಜನರ ಬಹುದಿನಗಳ ಬೇಡಿಕೆಯಾಗಿದ್ದು, ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ ಬರೆದು, ಸಭೆ ನಡೆಸಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸಚಿವರಾದ ಅಶ್ವಿ‌ನಿ ವೈಷ್ಣವ್‌ ಅವರು ಈ ಆದೇಶ ಹೊರಡಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News