Friday, March 1, 2024
Homeಸುದ್ದಿ92 ಹೇರೂರು: ತರಬೇತಿ‌‌ ಸಮಯದಲ್ಲೇ ಕೈಕೊಟ್ಟ ಇವಿಎಮ್ ಯಂತ್ರ! ಯಾರದ್ದೋ‌ ಮತ ಇನ್ಯಾರಿಗೋ!

92 ಹೇರೂರು: ತರಬೇತಿ‌‌ ಸಮಯದಲ್ಲೇ ಕೈಕೊಟ್ಟ ಇವಿಎಮ್ ಯಂತ್ರ! ಯಾರದ್ದೋ‌ ಮತ ಇನ್ಯಾರಿಗೋ!

92 ಹೇರೂರು ಫೆ‌ 13 : ಮಾನ್ಯ ಕಾಪು ತಹಶೀಲ್ದಾರರ ನಿರ್ದೇಶನದಂತೆ ಇಂದು ಪೂರ್ವಾಹ್ನ ಘಂಟೆ 10 ರಿಂದ 11 ರವರೆಗೆ ಅಂಗನವಾಡಿ ಕೇಂದ್ರ 92 ನೇ ಹೇರೂರು ಇಲ್ಲಿನ ಚುನಾವಣಾ ಬೂತ್ ನಂಬ್ರ 121 ರಲ್ಲಿ ಮತದಾನ ಯಂತ್ರ ಇವಿಎಂ ಪ್ರದರ್ಶನ ಆಯೋಜಿಸಲಾಗಿತ್ತು .

ಈ ತರಬೇತಿ ಯಲ್ಲಿ EVM ಮಿಷನ್ ನಲ್ಲಿ ಮತದಾರರು ಹಾಕಿದ ಮತ, ಬೇರೇನೇ ಪಕ್ಷಕ್ಕೆ ಹೋಗುವುದು ಕಂಡು ಬಂದಿದೆ.

ತರಬೇತಿ ಕಾರ್ಯಕ್ರಮದಲ್ಲೇ ಹೀಗೆ ತಪ್ಪು ನಡೆದರೆ ಮುಂದೆ ಚುನಾವಣಾ ಸಮಯದಲ್ಲಿ ಈ ಯಂತ್ರವನ್ನು ನಂಬೋದಾದರೂ ಹೇಗೆ ಎಂದು‌ ಸ್ಥಳೀಯರು ಕಳವಳ ವ್ಯಕ್ತಪಡಿಸಿದರು ಹಾಗೂ 92 ಹೆರೂರಿನ ಮತದಾರರು ಇದನ್ನು ತರಾಟೆಗೆ ತೆಗೆದುಕೊಂಡು ಅಲ್ಲಿಂದ ತಮ್ಮ ತಮ್ಮ ಮನೆಗೆ ನಿರ್ಗಮಿಸಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News