Tuesday, April 16, 2024
Homeಸುದ್ದಿಕರಾವಳಿಮಂಗಿಲಾರು ಕ್ರಾಸ್ ಬಳಿ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ!ಎರಡು ವರ್ಷದ ಮಗು ಸಹಿತ ಬೈಕ್...

ಮಂಗಿಲಾರು ಕ್ರಾಸ್ ಬಳಿ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ!ಎರಡು ವರ್ಷದ ಮಗು ಸಹಿತ ಬೈಕ್ ಸವಾರ ಗಂಭೀರ

ಕಾರ್ಕಳ, ಡಿ.30: ತಾಲೂಕಿನ ಹಿರ್ಗಾನ ಗ್ರಾಮದ ಮಂಗಿಲಾರು ಕ್ರಾಸ್ ಬಳಿ ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಎರಡು ವರ್ಷದ ಮಗು ಸಹಿತ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಅಂಡಾರು ಗ್ರಾಮದ ಕೊಂದಲ್ಕೆ ನಿವಾಸಿ ಬೈಕ್ ಸವಾರ ನಿತ್ಯಾನಂದ ಕುಲಾಲ್( 32) ಹಾಗೂ ಅವರೊಂದಿಗೆ ಇದ್ದ ಮೂರು ವರ್ಷದ ಮಗು ಕೂಡ ಗಂಭೀರವಾಗಿ ಗಾಯಗೊಂಡಿದೆ. ಗಾಯಾಳುಗಳನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್ ಸವಾರ ನಿತ್ಯಾನಂದ ತನ್ನ ಸಹೋದರಿಯ ಮಗುವನ್ನು ಬೈಕ್‌ ನಲ್ಲಿ ಕೂರಿಸಿಕೊಂಡು ಕಾರ್ಕಳದಿಂದ ಅಂಡಾರು ಕಡೆಗೆ ಹೋಗುತ್ತಿದ್ದ ವೇಳೆ ಹೆಬ್ರಿ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಚಾಲಕ ಎದುರಿನಲ್ಲಿ ಹೋಗುತ್ತಿದ್ದ ವಾಹನವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ನಿತ್ಯಾನಂದ ಕುಲಾಲ್ ಸವಾರಿ ಮಾಡಿ ಹೋಗುತ್ತಿದ್ದ ಬೈಕಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಹಾಗೂ ಮಗು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಬೈಕ್ ನುಜ್ಜುಗುಜ್ಜಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News