Monday, April 22, 2024
Homeಸುದ್ದಿಕರಾವಳಿಪಡುಬೆಳ್ಳೆ ಡಿ10 : ZIZO Education ಅರ್ಪಿಸುವ Let's Nacho ನೃತ್ಯ ಸ್ಪರ್ಧೆ

ಪಡುಬೆಳ್ಳೆ ಡಿ10 : ZIZO Education ಅರ್ಪಿಸುವ Let’s Nacho ನೃತ್ಯ ಸ್ಪರ್ಧೆ

ಪಡುಬೆಳ್ಳೆ : ZIZO EDUCATION ವತಿಯಿಂದ ನಡೆಯುವ let’s Nacho ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ ಇಂದು(ಡಿ 10) ನಡೆಯಲಿದೆ. ತುಳು ಸ್ಟಾರ್ ನಟ ಸತೀಶ್ ಬಂದಲೆ, ಕಾಮೆಡಿ ಕಿಲಾಡಿ ರಾಕೇಶ್ ಪೂಜಾರಿ,ರವಿ ಕಟಪಾಡಿ, ದೀಪು ಶೆಟ್ಟಿಗಾರ್, ನಟ ನಟಿಯರು, ಕ್ರೀಡಾ ಸಾಧಕರು ಸೇರಿದಂತೆ ಹಲವರು ಪಾಲ್ಗೊಂಡು ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ.

ಜಿಲ್ಲಾ ಮಟ್ಟದ ಅತೀ ದೊಡ್ಡ ಡಾನ್ಸಿಂಗ್ ವೇದಿಕೆಯಲ್ಲಿ ವೈಯಕ್ತಿಕ ಹಾಗೂ ಸಮೂಹ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು ವೈಯಕ್ತಿಕ ವಿಭಾಗದ ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ. 3000 ಹಾಗೂ ದ್ವಿತೀಯ ಬಹುಮಾನ ರೂ. 1500 ಜತೆಗೆ ಟ್ರೋಫಿ ಹಾಗೆಯೇ ಸಮೂಹ ವಿಭಾಗದಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನವಾಗಿ ರೂ 8000 ಮತ್ತು ದ್ವಿತೀಯ ಬಹುಮಾನ ರೂ 4000 ಹಾಗೂ ಟ್ರೋಫಿ ಹಾಗೆಯೇ ಪ್ರೋತ್ಸಾಹಕವಾಗಿ ಎರಡು ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೇರ ಪ್ರಸಾರದ ಲಿಂಕ್: https://youtu.be/s3QP2zJ1Bp8

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News