Tuesday, June 18, 2024
Homeಸುದ್ದಿಉಡುಪಿಯಲ್ಲಿ ಜೂ. ರಿಷಬ್ ಶೆಟ್ಟಿಗೆ ಫುಲ್ ಡಿಮ್ಯಾಂಡ್ ! ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು

ಉಡುಪಿಯಲ್ಲಿ ಜೂ. ರಿಷಬ್ ಶೆಟ್ಟಿಗೆ ಫುಲ್ ಡಿಮ್ಯಾಂಡ್ ! ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು

‘ಕಾಂತಾರ’ ರಿಲೀಸ್ ಆಗಿದ್ದೇ ಆಗಿದ್ದು ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗ ಹೊರಹೊಮ್ಮಿದ್ದಾರೆ. ರಿಷಬ್ ಸ್ಟೈಲ್, ರಿಷಬ್ ಹೇರ್‌ ಸ್ಟೈಲ್, ಕಾಂತಾರದಲ್ಲಿ ಬಳಸಿದ ಬೈಕ್, ಕನ್ನಡಕ ಎಲ್ಲವೂ ಅಭಿಮಾನಿಗಳಿಗೆ ಇಷ್ಟ ಆಗಿದೆ. ಆದ್ರೀಗ ಇದೇ ಗೆಟಪ್‌ನಲ್ಲಿ ಥೇಟ್ ‘ಕಾಂತಾರ’ದ ಶಿವನನ್ನೇ ಹೋಲುವ ಜೂನಿಯರ್‌ ರಿಷಬ್ ಶೆಟ್ಟಿ ಪ್ರತ್ಯಕ್ಷ ಆಗಿದ್ದಾರೆ.

ಅಂದ್ಹಾಗೆ ಉಡುಪಿಯಲ್ಲಿರುವ ಜೂನಿಯರ್ ರಿಷಬ್ ಶೆಟ್ಟಿಯ ಅಸಲಿ ಹೆಸರು ಪ್ರದೀಪ್ ಆಚಾರ್ಯ. ಸ್ವಲ್ಪ ಯಾಮಾರಿದ್ರೆ, ರಿಷಬ್ ಶೆಟ್ಟಿ ಅಂತ ಮಿಸ್ ಮಾಡಿಕೊಳ್ಳೋದು ಗ್ಯಾರಂಟಿ. ಯಾಕಂದ್ರೆ, ರಿಷಬ್ ಶೆಟ್ಟಿಯನ್ನೇ ಹೋಲುವ ಪ್ರದೀಪ್‌ಗೀಗ ಉಡುಪಿಯಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ. ಈಗಾಗಲೇ ಹೋಟೆಲ್ ಜಾಹೀರಾತಿನಲ್ಲೂ ನಟಿಸಿ ಬಂದಿದ್ದಾರೆ. ಇದೇ ವೇಳೆ ಪ್ರದೀಪ್ ಆಚಾರ್ಯ ದಿಢೀರನೇ ಜೂನಿಯರ್ ರಿಷಬ್ ಶೆಟ್ಟಿ ಆಗಿದ್ದೇಗೆ? ‘ಕಾಂತಾರ’ ರಿಲೀಸ್ ಬಳಿಕ ಡಿಮ್ಯಾಂಡ್ ಬಂದಿದ್ದೇಗೆ? ತನ್ನ ಹಿನ್ನೆಲೆಯೇನು?

ಜೂ. ರಿಷಬ್ ಶೆಟ್ಟಿ ಹಿನ್ನೆಲೆಯೇನು?

“ನಾನು ಉಡುಪಿ, ಶಿರ್ವದಲ್ಲಿ ಇರೋದು. ಇಲ್ಲಿ ಆಯುಷ್ ಅನ್ನುವ ಮೊಬೈಲ್ ಶಾಪ್‌ನಲ್ಲಿ ಕಳೆದ 7 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ವಿವೋ ಮೊಬೈಲ್ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದೇನೆ.

ಜೂ.ರಿಷಬ್ ಶೆಟ್ಟಿ ಫೇಮಸ್ ಆಗಿದ್ದೇಗೆ?

“ನಾನು ಮೊಬೈಲ್ ಶಾಪ್‌ನಲ್ಲಿ ವರ್ಕ್ ಮಾಡುತ್ತಿದ್ದೆ. ಬಂದವರೆಲ್ಲಾ ರಿಷಬ್ ಶೆಟ್ಟಿಯವರ ಹಾಗೆ ಕಾಣಿಸುತ್ತೀಯ ಅಂತ ಹೇಳುತ್ತಿದ್ದರು. ಹಾಗೇ ಮೊಬೈಲ್‌ ಶಾಪ್‌ ಬಂದ ಕಸ್ಟಮರ್‌ಗಳೂ ಕೂಡ ಹಾಗೆ ಹೇಳುವುದಕ್ಕೆ ಶುರು ಮಾಡಿದ್ದರು. ಆ ಮೇಲೆ ಸ್ನೇಹಿತರು ರೀಲ್ಸ್ ಮಾಡೋಣ ಅಂತ ಹೇಳಿದ್ರು. ಒಂದು ರೀಲ್ ಮಾಡಿದ್ದೆ ಅಷ್ಟೇ. ಹಾಗೆ ಮಾಡಿ ನಾನು ಕಾಂತಾರ ಗೆಟಪ್‌ನಲ್ಲೇ ವಾಪಸ್ ಬರುತ್ತಿದ್ದೆ. ಅದೇ ಗೆಟಪ್‌ನಲ್ಲಿ ಸ್ಪಂದನಾ ಟಿವಿಯವರು ನೋಡಿದ್ರು. ಅವತ್ತೇ ಕಾಲ್ ಮಾಡಿ, ಸಂದರ್ಶನಕ್ಕೆ ಕರೆದರು. ಆ ಸಂದರ್ಶನಕ್ಕೆ ಹೋಗಿ ಬಂದ ಮೂರು ಗಂಟೆಯಲ್ಲೇ ವಿಡಿಯೋ ಫುಲ್ ವೈರಲ್ ಆಯ್ತು.

ಸಿನಿಮಾ ಸಿಕ್ಕರೆ ನಟಿಸುತ್ತೀರಾ?

“ನನಗೆ ಈಗ ಜನರು ಗುರುತಿಸುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ಸಿನಿಮಾಗೆ ಅವಕಾಶ ಬಂದರೆ, ಕಷ್ಟ ಇದೆ. ಯಾಕೆಂದ್ರೆ, ನನಗೆ ಒಂದು ಸ್ವಲ್ಪನೂ ಆಕ್ಟಿಂಗ್ ಬರಲ್ಲ. ಇದೂವರೆಗೂ ಎಲ್ಲೂ ಆಕ್ಟಿಂಗ್ ಕೂಡ ಮಾಡಿಲ್ಲ. ಈ ವಿಡಿಯೋ ವೈರಲ್ ಆದಮೇಲೆ ಮಂಗಳೂರಿನ ಹೋಟೆಲ್‌ನವರು ಕರೆದಿದ್ದರು. ಅಲ್ಲೊಂದು ಜಾಹೀರಾತಿಗಾಗಿ ಶೂಟಿಂಗ್ ಮಾಡಿಸಿದ್ದಾರೆ. ಯಾರಿಗೋ ಒಂದಿಬ್ಬರು ನಂಬರ್ ಕೇಳಿದ್ದಾರಂತೆ, ಕೊಡಿ ನೋಡುವಾ ಅಂತ ಹೇಳಿದ್ದೇನೆ. ಮತ್ತೆ ನೇರವಾಗಿ ಅವಕಾಶ ಅಂತ ಬಂದಿಲ್ಲ.

ರಿಷಬ್ ಶೆಟ್ಟಿ ಸಿಕ್ಕರೆ ಏನು ಮಾಡುತ್ತೀರಾ?

“ಇಲ್ಲ ರಿಷಬ್ ಶೆಟ್ಟಿಯವರನ್ನು ಇದೂವರೆಗೂ ಭೇಟಿಯಾಗಿಲ್ಲ. ಅವರನ್ನು ಭೇಟಿ ಮಾಡುವುದಕ್ಕೆ ನನಗೆ ತುಂಬಾನೇ ಆಸೆ ಉಂಟು. ಅವರಿಂದಾಗಿ ಸ್ವಲ್ಪ ಜನ ನನ್ನನ್ನು ಗುರುತು ಹಿಡಿದಿದ್ದಾರೆ. ಅವರನ್ನು ಭೇಟಿ ಮಾಡಬೇಕು. ಅವರೊಂದಿಗೆ ಸೆಲ್ಫಿ ತೆಗೀಬೇಕು ಅಂತ ತುಂಬಾನೇ ಆಸೆಯಿದೆ.” ಎನ್ನುತ್ತಾರೆ ಉಡುಪಿಯ ಜೂನಿಯರ್ ರಿಷಬ್ ಶೆಟ್ಟಿ.

ಕೃಪೆ: ಫಿಲ್ಮೀ ಬೀಟ್

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News