Thursday, March 28, 2024
Homeಸುದ್ದಿಶಿರ್ವ ವಿದ್ಯಾರ್ಥಿನಿಯರ ಅದ್ಭುತ ಸಾಧನೆ: ಇಂಡೊ – ನೇಪಾಲ್ ತ್ರೋ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ...

ಶಿರ್ವ ವಿದ್ಯಾರ್ಥಿನಿಯರ ಅದ್ಭುತ ಸಾಧನೆ: ಇಂಡೊ – ನೇಪಾಲ್ ತ್ರೋ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಭಾರತಕ್ಕೆ ಚಿನ್ನ!

ನೇಪಾಳದಲ್ಲಿ ನಡೆದ ಇಂಡೊ – ನೇಪಾಲ್ ತ್ರೋ ಬಾಲ್ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಭಾರತ ಗೆಲುವಿನ ಸಾಧನೆ ಮಾಡಿದ್ದು, ತಂಡದಲ್ಲಿ ಉಡುಪಿ ಜಿಲ್ಲೆಯ ಮೂವರು ಆಟಗಾರ್ತಿಯರು ಇದ್ದರು ಎಂಬೂದು ಹೆಮ್ಮೆಯ ವಿಷಯ. ನವಂಬರ್ 12 ಮತ್ತು 13 ಕ್ಕೆ ನೇಪಾಳದಲ್ಲಿ ಐದು ರಾಜ್ಯಗಳ ತ್ರೋಬಾಲ್ ಕ್ರೀಡಾಕೂಟ ನಡೆದಿದೆ. ದೇಶವನ್ನು ಪ್ರತಿನಿಧಿಸಿದ್ದ ತಂಡದಲ್ಲಿ ಕರ್ನಾಟಕದ ಮೂವರು ಯುವತಿಯರು ದೇಶಕ್ಕೆ ಗೌರವ ತಂದು ಕೊಡುವ ಕೆಲಸ ಮಾಡಿದ್ದಾರೆ. ಇಂಡೋ ನೇಪಾಳ ಚಾಂಪಿಯನ್ಶಿಪ್ ನಲ್ಲಿ ಭಾರತ ಶ್ರೀಲಂಕಾ ಬಾಂಗ್ಲಾದೇಶ ನೇಪಾಳ ಮತ್ತು ಮಲೇಶಿಯಾ ತಂಡಗಳು ಭಾಗವಹಿಸಿದ್ದವು. ಭಾರತ ಚಿನ್ನದ ಪದಕ ಗೆದ್ದು ದೊಡ್ಡ ಸಾಧನೆ ಮಾಡಿದೆ.

ಭಾರತದ ತಂಡದಲ್ಲಿ ಮೂರು ಆಟಗಾರ್ತಿಯರು ಕರ್ನಾಟಕ ರಾಜ್ಯದವರು ಎಂಬ ಹೆಗ್ಗಳಿಕೆ ನಮ್ಮದು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂವರು ಆಟಗಾರ್ತಿಯರು ಭಾರತ ದೇಶ ವನ್ನು ಪ್ರತಿನಿಧಿಸಿದ್ದು ಕರಾವಳಿಯ ಹೆಮ್ಮೆ. ಕಾಪು ತಾಲೂಕು ಶಿರ್ವದ ಶಮಿತಾ ಮತ್ತು ಧನ್ಯ, ಮುದರಂಗಡಿಯ ರಶ್ಮೀ ಥ್ರೋ ಬಾಲ್ ಚಾಂಪಿಯನ್ಶಿಪ್ ನಲ್ಲಿ ಪಾಲ್ಗೊಂಡ ಹೆಮ್ಮೆಯ ಆಟಗಾರ್ತಿಯರು. ಇವರಲ್ಲಿ ಶಮಿತಾ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ನೇರವಾಗಿ ಆಯ್ಕೆಯಾದರು.ವಿನಾಯಕ ಮತ್ತು ರುದ್ರೇಶ್ ತಂಡಕ್ಕೆ ತರಬೇತುದಾರರಾಗಿ ಸೇವೆ ಸಲ್ಲಿಸಿದರು.

ಪೈನಲ್‌ ಪಂದ್ಯಾಟದಲ್ಲಿ ಮೊದಲ ಸೆಟ್‌ನಲ್ಲಿ ಭಾರತ 20 ಮತ್ತು ನೇಪಾಳ 25 ಅಂಕಗಳಿಂದ ಮುನ್ನಡೆಯನ್ನು ಸಾಧಿಸಿತ್ತು. 2ನೇ ಸೆಟ್‌ನಲ್ಲಿ ಭಾರತ 25 ಮತ್ತು ನೇಪಾಳ 15 ಮತ್ತು ಅಂತಿಮ ಸೆಟ್‌ನಲ್ಲಿ ಭಾರತ 25 ಮತ್ತು ನೇಪಾಳ 18 ಅಂಕಗಳಿಂದ ಭಾರತ ತ್ರೋಬಾಲ್‌ ತಂಡ ಜಯಭೇರಿಯನ್ನು ಬಾರಿಸಿತು. ಪೈನಲ್‌ ಪಂದ್ಯಾಟದ ಉತ್ತಮ ಆಟಗಾರ್ತಿಯಾಗಿ ಸೌಂದರ್ಯ ಹಾಗೂ Best Smasher ಆಗಿ ಶಮಿತಾ ಆಯ್ಕೆಯಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News