Thursday, April 25, 2024
Homeಸುದ್ದಿಮೂಡುಬಿದಿರೆ: ಶಾಲಾ ಬಸ್ ಮತ್ತು ಕಾರು ನಡುವೆ ಅಪಘಾತ - ಕಾರು ಚಾಲಕ ಗಂಭೀರ

ಮೂಡುಬಿದಿರೆ: ಶಾಲಾ ಬಸ್ ಮತ್ತು ಕಾರು ನಡುವೆ ಅಪಘಾತ – ಕಾರು ಚಾಲಕ ಗಂಭೀರ

ಮೂಡುಬಿದಿರೆ: ಶಾಲಾ ವಾಹನಕ್ಕೆ ಕಾರೊಂದು ಬುಧವಾರ ಸಾಯಂಕಾಲ ಅಲಂಗಾರು ಬಳಿ ಢಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನ ಚಾಲಕ ಗಂಭೀರ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೂಡುಬಿದಿರೆ- ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಆಲಂಗಾರಿನಲ್ಲಿ ಸಾಯಂಕಾಲ 4 ಗಂಟೆಯ ವೇಳೆಗೆ ಅಪಘಾತ ಸಂಭವಿಸಿದ್ದು ಶಾಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.ಮೂಡುಬಿದಿರೆ ಆಲಂಗಾರಿನ ಸೈಂಟ್ ಥೋಮಸ್ ಆಂಗ್ಲ ಮಾಧ್ಯಮ ಶಾಲೆಯ ಬಸ್ ಮಕ್ಕಳನ್ನು ಮನೆಗೆ ಬಿಡಲು ಬೆಳುವಾಯಿ ಕಡೆಗೆ ಹೋಗುತ್ತಿದ್ದಾಗ ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಕಾರು ಆಲಂಗಾರು ಬಳಿ ಬ್ರೇಕ್ ಹಾಕಿದ್ದು ಆಗ ತಕ್ಷಣ ಕಾರು ಬಲಕ್ಕೆ ತಿರುಗಿ ಶಾಲಾ ವಾಹನದ ಕಡೆಗೆ ಬಂದಿದೆ ಆಗ ಶಾಲಾ ವಾಹನದ ಚಾಲಕ ಎಡ ಕಡೆಗೆ ವಾಹನವನ್ನು ತಿರುಗಿಸಿದ್ದು,ಆಗ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ನಿಂತಾಗ ಕಾರು ಅಲ್ಲಿಗೆ ಬಂದು ಗುದ್ದಿದೆ. ಕಾರಿನ ಚಾಲಕನ ಮೂಗು ಮತ್ತು ಕಿವಿಯಿಂದ ರಕ್ತ ಹರಿಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಇನ್ನು ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಇನ್ನೋರ್ವ ವ್ಯಕ್ತಿಗೂ ಗಾಯಗಳಾಗಿದೆ. ಶಾಲಾ ವಾಹನದ ಮುಂಭಾಗವು ಸಂಪೂರ್ಣ ಜಖಂಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News