Friday, March 29, 2024
Homeಸುದ್ದಿನಡುರಸ್ತೆಯಲ್ಲೇ ರಿಕ್ಷಾ ನಿಲ್ಲಿಸಿ ಕಂಠಪೂರ್ತಿ ಕುಡಿದು ನಿದ್ರಿಸಿದ ಚಾಲಕ!

ನಡುರಸ್ತೆಯಲ್ಲೇ ರಿಕ್ಷಾ ನಿಲ್ಲಿಸಿ ಕಂಠಪೂರ್ತಿ ಕುಡಿದು ನಿದ್ರಿಸಿದ ಚಾಲಕ!

ಪುತ್ತೂರು: ಪುತ್ತೂರು-ದರ್ಬೆ ರಸ್ತೆಯ ಕಲ್ಲಾರೆ ಎಂಬಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ವಾಹನವನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಕುಡಿದು ಮಲಗಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಕಲ್ಲಾರೆ ಧನ್ವಂತ್ರಿ ಆಸ್ಪತ್ರೆ ಎದುರು ಆಟೋ ಚಾಲಕ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕುಡಿದು ಮಲಗಿದ್ದನ್ನು ಗಮನಿಸಿದ ಸಾರ್ವಜನಿಕರು ಪುತ್ತೂರು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿ ಅಪಾಯ ತಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಆಟೋ ಚಾಲಕ ಪಾನಮತ್ತನಾಗಿದ್ದ. ಸಂಚಾರ ಪೊಲೀಸರು ಆಟೊ ಚಾಲಕನ ವಿರುದ್ಧ ಡ್ರಿಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News