ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್: ಪೆಟ್ರೋಲ್, ಡೀಸೆಲ್ ದರ 90 ಪೈಸೆ ಹೆಚ್ಚಳ

ನವದೆಹಲಿ, ಮೇ. 19: ದೇಶಾದ್ಯಂತ ಗ್ರಾಹಕರಿಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಳ್ಳಂಬೆಳಗ್ಗೆ ಬೆಲೆ ಏರಿಕೆಯ ಶಾಕ್ ನೀಡಿವೆ.

ಮೇ 15 ರಂದು ಇಂಧನ ದರ 3 ರೂ.ನಷ್ಟು ಏರಿಕೆಯಾಗಿತ್ತು. ಇಂದು ಬೆಳ್ಳಂಬೆಳಗ್ಗೆ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ದರ ಪ್ರತಿ ಲೀಟರ್‌ಗೆ ಸರಾಸರಿ 90 ಪೈಸೆ ಏರಿಕೆಯಾಗಿದೆ. ಇದು ಒಂದು ವಾರದೊಳಗೆ 2ನೇ ಬಾರಿ ತೈಲ ಬೆಲೆ ಏರಿಕೆಯಾದಂತಾಗಿದೆ.

ಕೇವಲ ಐದು ದಿನಗಳ ಅಂತರದಲ್ಲಿ ಎರಡು ಬಾರಿ ಇಂಧನ ದರ ಹೆಚ್ಚಳವಾಗುತ್ತಿರುವ ಹಿನ್ನೆಲೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಗತಿಕ ಪರಿಸ್ಥಿತಿ ಅರ್ಥವಾದರೂ, ಸರ್ಕಾರ ಸಾಮಾನ್ಯ ಜನರ ಹಿತದೃಷ್ಟಿಯಿಂದ ಇಂಧನ ದರ ನಿಯಂತ್ರಣಕ್ಕೆ ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇನ್ನು ಸತತ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುವ ಆತಂಕ ಎದುರಾಗಿದೆ.

You cannot copy content from Baravanige News

Scroll to Top