ಶಿರ್ವ ಜ 20: ಶಿರ್ವ ಸಮೀಪದ ಪಿಲಾರುಖಾನ ಗುಂಡುಪಾದೆ ಬಳಿ ಮಂಗಳವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹೇಶ್ (30) ಎಂಬ ಯುವಕನಿಗೆ ಗಂಭೀರ ಗಾಯಗಳಾಗಿವೆ.
ಮಾಹಿತಿಯ ಪ್ರಕಾರ, ದಿನಾಂಕ 20-01-2026 ರಂದು ಸಂಜೆ ಸುಮಾರು 7:20ರ ವೇಳೆಗೆ ಮಹೇಶ್ ಅವರು ಆಕ್ಟಿವಾ ಸ್ಕೂಟರ್‌ನಲ್ಲಿ ಬೆಳ್ಮಣ್ಣಿನಿಂದ ಶಿರ್ವ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಶಿರ್ವ ಕಡೆಯಿಂದ ಬೆಳ್ಮಣ್ಣು ಕಡೆಗೆ ಬರುತ್ತಿದ್ದ ಲಾರಿ ಹಾಗೂ ಎದುರಿನಿಂದ ಬರುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ.
ಅಪಘಾತದ ಪರಿಣಾಮ ಮಹೇಶ್ ಅವರ ಬಲಕಾಲಿಗೆ ಗಂಭೀರ ಒಳಜಖಂ ಆಗಿದ್ದು, ತಲೆಗೆ ರಕ್ತಸ್ರಾವ, ಕೈ ಮತ್ತು ಕಾಲುಗಳಿಗೆ ತರಚಿದ ಗಾಯಗಳು ಹಾಗೂ ಕಿವಿಯಿಂದ ರಕ್ತ ಹೊರಬಂದಿದೆ ಎಂದು ತಿಳಿದುಬಂದಿದೆ.
ತಕ್ಷಣ ಸಾರ್ವಜನಿಕರು ಶಿರ್ವ ಪೊಲೀಸರಿಗೆ ಮಾಹಿತಿ ನೀಡಿದ್ದು, ಪಿಎಸ್ಐ ಮಂಜುನಾಥ ಮರಬದ ಹಾಗೂ ಠಾಣಾ ಸಿಬ್ಬಂದಿಯವರು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರ ಸಹಕಾರದೊಂದಿಗೆ ಗಾಯಾಳುವನ್ನು ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ನಂತರ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2026, ಕಲಂ 281, 125(a) BNS 2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.


