ಉಡುಪಿ ಜಿಲ್ಲಾ ಸೈನೇಜ್ ಅಸೋಸಿಯೇಶನ್ ರಿ. ಇದರ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆ!

ಉಡುಪಿ ಜಿಲ್ಲಾ ಸೖನೇಜ್ ಅಸೋಸಿಯೇಶನ್ ರಿ. ಇದರ ದ್ವಿತೀಯ ವರ್ಷದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ ಅಧ್ಯಕ್ಷರಾದ ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿಯವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುದರ ಮೂಲಕ ಉದ್ಯಾವರ ನಿತ್ಯಾನಂದ ಸಭಾಂಗಣದಲ್ಲಿ ಜುಲೈ 27ರಂದು ನಡೆಯಿತು.

ಸಂಘದ ಕಾರ್ಯದರ್ಶಿಯಾದ ಶ್ರೀಯುತ ಸುಧಾಕರ್ ಕಾರ್ಕಳ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮುಖ್ಯ ಅತಿಥಿ ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ಶ್ರೀಯುತ ದಿನೇಶ್ ಮೂಡಬಿದ್ರಿ ಯವರು ಮಹಾಸಭೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಯುತ ಹರೀಶ್ ಅಮೀನ್ ಸಂತೆಕಟ್ಟೆ ರವರು ವರದಿವಾಚನ ಮಾಡಿದರು.‌ ಕೋಶಾಧಿಕಾರಿಯವರಾದ ಶ್ರೀಯುತ ಸಂದೀಪ್ ಮಣಿಪಾಲ್ ರವರು ಲೆಕ್ಕಪತ್ರ ಮಂಡನೆ ಮಾಡಿದರು. ಭಾರತಮಾತೆಗೆ ಪುಷ್ಪಾರ್ಚನೆ ಮಾಡುತ್ತಾ, ಪಹಲ್ಗಾಂವ್ ಹಾಗೂ ವಿಮಾನ ಅಪಘಾತದಲ್ಲಿ ದುರ್ಮರಣಹೊಂದಿದವರಿಗೆ ಶ್ರಧ್ಧಾಂಜಲಿ ಸಲ್ಲಿಸಲಾಯಿತು.

ಸಂಘದ ಸದಸ್ಯರುಗಳಾದ ದಿನೇಶ್ ತೆಕ್ಕಟ್ಟೆ, ವಿಜಯ್ ಅಂಕದಕಟ್ಟೆ, ಅಶ್ವಿನ್ ಕಾರ್ಕಳ, ದಯಾನಂದ ಬೈಲೂರು, ದಿನೇಶ್ ದೊಡ್ಡಣಗುಡ್ಡೆ, ರೆಹಮತುಲ್ಲ ಉಡುಪಿ ಇವರನ್ನು ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಹೊಸ ಸದಸ್ಯರನ್ನು ಸಂಘಕ್ಕೆ ಸೇರ್ಪಡೆಗೊಳಿಸಲಾಯಿತು. ಅನಾರೋಗ್ಯ ಒಳಪಟ್ಟು ಶಸ್ತ್ರ ಚಿಕಿತ್ಸೆ ಒಳಗಾಗಿದ್ದ ಶ್ರೀಯುತ ಸತೀಶ್ ಕಡೆಕಾರ್ ರವರಿಗೆ ರೂ. 25000/ ನೀಡಲಾಯಿತು.

ಶ್ರೀಯುತ ಪ್ರಸನ್ನ ಅಜೆಕಾರ್ ಕಾರ್ಯಕ್ರಮ ನಿರೂಪಿಸಿದರು, ಶ್ರೀಯುತ ಸುಧಾಕರ್ ಕಾರ್ಕಳ ಧನ್ಯವಾದವನ್ನು ತಿಳಿಸಿದರು.

You cannot copy content from Baravanige News

Scroll to Top