ಅ 25, ಬರವಣಿಗೆ ನ್ಯೂಸ್: ಕೆ ಕೆ ಫ್ರೆಂಡ್ಸ್ ಕಡಂಬು ಇದರ ವತಿಯಿಂದ ದೀಪಾವಳಿಯ ಪ್ರಯುಕ್ತ ನಿನ್ನೆ ಬ್ರಹತ್ ಗೂಡುದೀಪ ಕಡಂಬು ಮೈದಾನದಲ್ಲಿ ಅಳವಡಿಸಿ ದೀಪಾವಳಿ ಆಚರಿಸಲಾಯಿತು. ಕೆ ಕೆ ಫ್ರೆಂಡ್ಸ್ ನ ಎಲ್ಲಾ ಸದಸ್ಯರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದು ವಿಭಿನ್ನವಾಗಿ ದೀಪಾವಳಿಯನ್ನು ಆಚರಿಸಿದರು
![](https://i0.wp.com/wordpress-885334-3069229.cloudwaysapps.com/wp-content/uploads/2022/10/kad2-edited-optimized.jpeg?resize=442%2C785&ssl=1)
ಸುಮಾರು 9 ಅಡಿ (ಫೀಟ್) ಎತ್ತರ ಮತ್ತು 5 ಅಡಿ (ಫೀಟ್) ಅಗಲದ ಗೂಡುದೀಪ ಕಡಂಬು ಮೈದಾನದಲ್ಲಿ ರಾರಾಜಿಸುತ್ತಿದೆ ಅದೇ ರೀತಿ ಮೈದಾನದಲ್ಲಿ ಮಾಡಿದ ಲೈಟಿಂಗ್ಸ್ ನೋಡುಗರನ್ನು ತನ್ನತ್ತ ಆಕರ್ಷಿಸುತ್ತಿದೆ.