Home ಸುದ್ದಿ ಬಂಟಕಲ್ಲು : ಸಾರ್ವಜನಿಕ ಉಚಿತ ವಾಹನ ಪೂಜೆ

ಬಂಟಕಲ್ಲು : ಸಾರ್ವಜನಿಕ ಉಚಿತ ವಾಹನ ಪೂಜೆ

ಬಂಟಕಲ್ಲು: ರಾಜಾಪುರ ಸಾರಸ್ವತ ಯುವ ವೃಂದ ಬಂಟಕಲ್ಲು ಇವರ ಆಶ್ರಯದಲ್ಲಿ ವರ್ಷಂಪ್ರತಿಯಂತೆ ಸಾರ್ವಜನಿಕ ಉಚಿತ ವಾಹನ ಪೂಜೆ ಯು ದಿನಾಂಕ 26 ರ ಬುಧವಾರದಂದು ಬಂಟಕಲ್ಲು ದೇವಸ್ಥಾನದಲ್ಲಿ ಬೆಳಿಗ್ಗೆ ಗಂಟೆ 10 ಕ್ಕೆ ಶ್ರೀಕಾಂತ್ ಭಟ್ ರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಯೊಂದಿಗೆ ನಡೆಯಲಿದೆ.

ಸಾರ್ವಜನಿಕರು ತಮ್ಮ ವಾಹನಗಳೊಂದಿಗೆ ಬೆಳಿಗ್ಗೆ ಗಂಟೆ 9.45 ಕ್ಕೆ ಉಪಸ್ಥಿತರಿದ್ದು ಈ ವಾಹನ ಪೂಜೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ. ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ. ವಾಹನ ಪೂಜೆಗೆ ಬೇಕಾದ ಹೂ, ತೆಂಗಿನಕಾಯಿ, ಲಿಂಬೆ ಹಣ್ಣು ಗಳನ್ನು ವಾಹನ ಮಾಲಕರೇ ತರಬೇಕು.

ವಾಹನ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಯುವ ವೃಂದದ ಪ್ರಕಟಣೆ ತಿಳಿಸಿದೆ.

Translate »

You cannot copy content from Baravanige News