ಸೂಡ ಶ್ರೀ ಸುಬ್ರಹ್ಮಣ್ಯ ಕುಣಿತ ಭಜನಾ ಮಂಡಳಿ ಉದ್ಘಾಟನಾ ಸಮಾರಂಭ

ಸೂಡ: ಸಿಂಹ ಸಂಕ್ರಮಣದ ಶುಭಾವಸರದಲ್ಲಿ, ಸೂಡ ಶ್ರೀ ಸುಬ್ರಹ್ಮಣ್ಯ ಕುಣಿತ ಭಜನಾ ಮಂಡಳಿಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿರ್ವ ಕೋಡು ಶ್ರೀ ಜಯಶೀಲ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಆ. 16 ರಂದು ಉದ್ಘಾಟನೆಗೊಂಡಿತು.

ವೇದಿಕೆಯಲ್ಲಿ, ಉದ್ಘಾಟಕರು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ವಿಷ್ಣುಮೂರ್ತಿ ಭಟ್.
ಕುಣಿತ ಭಜನಾ ತರಬೇತುದಾರರು ಕಾರ್ಕಳ ತಾಲೂಕು ಭಜನಾ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷರಾದ ಪಳ್ಳಿ ಶ್ರೀಕಾಂತ್ ಪ್ರಭು, ಶ್ರೀ ಕೆ.ಎಸ್ ರಮೇಶ್ ಶಾಸ್ತ್ರಿ, ಶ್ರೀ ಶಂಕರ್ ಕುಂದರ್, ಕಾರ್ಕಳ ಭಜನಾ ಒಕ್ಕೂಟದ ಅಧ್ಯಕ್ಷರಾದ ಶ್ರೋ ಶೈಲೇಶ್ ಸಾಣೂರು, ಭಜನಾ ಪರಿಷದ್ ಕಾರ್ಯದರ್ಶಿ ಶ್ರೀ ಸಚಿತ್ ನಂದಳಿಕೆ ಉಪಸ್ಥಿತರಿದ್ದರು.

ಭಜಕರಿಗೆ ತಾಳ, ಶಾಲು ವಿತರಿಸಿದ ಬಳಿಕ ಶ್ರೀ ಕೆ.ಎಸ್ ರಮೇಶ್ ಶಾಸ್ತ್ರಿ, ಶ್ರೀಕಾಂತ್ ಪ್ರಭು ಮತ್ತು ಶೈಲೇಶ್ ಸಾಣೂರು ಭಜಕರಿಗೆ ಭಜನೆಯ ಮಹತ್ವವನ್ನು ವಿವರಿಸಿದರು.

ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿಯ ಗೌರವ ಅಧ್ಯಕ್ಷರಾಗಿ ಶಿರ್ವ ಕೋಡು ಶ್ರೀ ಜಯಶೀಲ ಹೆಗ್ಡೆ, ಗೌರವ ಸಲಹೆಗಾರರಾಗಿ ಶ್ರೀ ಕೆ.ಎಸ್ ರಮೇಶ್ ಶಾಸ್ತ್ರಿ, ಶ್ರೀ ಶಂಕರ್ ಕುಂದರ್. ಸಂಚಾಲಕರಾಗಿ ಜೇರಿ.ಎಲ್ ಡಿಸೋಜ, ಅಧ್ಯಕ್ಷರು ಶ್ರೀ ರಾಘವೇಂದ್ರ ದೇವಾಡಿಗ, ಕಾರ್ಯದರ್ಶಿ ಶ್ರೀ ಸೂರಜ್ ಕುಲಾಲ್. ಕೋಶಾಧಿಕಾರಿ ಶ್ರೀ ಭರತ್. ಜೊತೆ ಕಾರ್ಯದರ್ಶಿ ಶ್ರೀಮತಿ ದೀಪಿಕಾ ಅಶೋಕ್, ಜೊತೆ ಕೋಶಾಧಿಕಾರಿ ಶ್ರೀಮತಿ ರಜನಿ ಜೋಗಿ ಇವರ ಹೆಸರುಗಳನ್ನು ಶ್ರೀ ಶಂಕರ್ ಕುಂದರ್ ರವರು ಘೋಷಣೆ ಮಾಡಿದರು.

ಕುಮಾರಿ ಪ್ರಾರ್ಥನಾ ಮತ್ತು ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು, ಜೇರಿ ಎಲ್ ಡಿಸೋಜ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು . ಶ್ರೀಮತಿ ದೀಪಿಕಾ ಅಶೋಕ್ ವಂದನಾರ್ಪಣೆ ಮಾಡಿ, ಶ್ರೀ ರಾಘವೇಂದ್ರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಭಜನಾ ಮಂಡಳಿಯಿಂದ ಕುಣಿತ ಭಜನೆ ನೆರವೇರಿತು.

Scroll to Top