Friday, March 1, 2024
Homeಸುದ್ದಿಶಿರ್ವ ಮಹಿಳಾ ಮಂಡಲ: ವಜ್ರ ಮಹೋತ್ಸವದ ಪ್ರಯುಕ್ತ ಗೋಶಾಲೆ ಭೇಟಿ, ಗೋವಿಗಾಗಿ ಮೇವು ಕಾರ್ಯಕ್ರಮ

ಶಿರ್ವ ಮಹಿಳಾ ಮಂಡಲ: ವಜ್ರ ಮಹೋತ್ಸವದ ಪ್ರಯುಕ್ತ ಗೋಶಾಲೆ ಭೇಟಿ, ಗೋವಿಗಾಗಿ ಮೇವು ಕಾರ್ಯಕ್ರಮ

ಶಿರ್ವ: ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಶಿರ್ವ ಮಹಿಳಾ ಮಂಡಲವು ಹಮ್ಮಿಕೊಂಡಿರುವ ತಿಂಗಳ ಕಾರ್ಯಕ್ರಮದಡಿಯಲ್ಲಿ ಫೆಬ್ರವರಿ ತಿಂಗಳ ಕಾರ್ಯಕ್ರಮವಾಗಿ ಗೋಶಾಲೆ ಭೇಟಿ ಇಂದು ನಡೆಯಿತು.

ಈ ಕಾರ್ಯಕ್ರಮದನ್ವಯ ಮಹಿಳಾ ಮಂಡಲದ ಸದಸ್ಯರು ಇಂದು ಶಿರ್ವ ಮಟ್ಟಾರ್ ಬಳಿ ಇರುವ ಶ್ರೀ ಧರ್ಮ ಫೌಂಡೇಶನ್ ನವರು ನಡೆಸುತ್ತಿರುವ ಗೋಶಾಲೆಗೆ ಭೇಟಿ ನೀಡಿ ಗೋವುಗಳಿಗಾಗಿ ಒಣಹುಲ್ಲು ಹಾಗೂ ಹಿಂಡಿಯನ್ನು ಗೋಶಾಲೆಯ ಗಿರೀಶ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗಿರೀಶ್ ಅವರು ಗೋಶಾಲೆ ಹಾಗೂ ಗೋವುಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಳೆ ಸ್ವಾಗತಿಸಿದರು. ಗಣೇಶೋತ್ಸವ ಸಮಿತಿಯ ಖಜಾಂಚಿ ಅನಂತ ಮುಡಿತ್ತಾಯ ಮಹಿಳಾ ಮಂಡಲದ ಗೌರವಾಧ್ಯಕ್ಷರಾದ ಬಬಿತಾ ಅರಸ, ಉಪಾಧ್ಯಕ್ಷೆ ಸುಮತಿ ಜಯಪ್ರಕಾಶ್ ಸುವರ್ಣ, ಕಾರ್ಯದರ್ಶಿ ಸ್ಪೂರ್ತಿ. ಪಿ.ಶೆಟ್ಟಿ,ಖಜಾಂಚಿ ಮರಿಯಾ ಜೆಸಿಂತಾ ಫುರ್ಟಾಡೋ, ಸದಸ್ಯರಾದ ದೀಪಾ ಶೆಟ್ಟಿ, ಐರಿನ್ ಲುಸ್ರಾದೋ, ಸುನೀತಾ ಸದಾನಂದ್, ವನಿತಾ ನಾಯಕ್, ಸುಜಾತ, ಶ್ವೇತಾ, ವಿನಯಾ ಕುಂದರ್, ಮಾಲತಿ ಮುಡಿತ್ತಾಯ, ರಾಜೀವಿ ಕುಂದರ್, ಕು.ಪ್ರಿಯಾಂಕ ವಾಗ್ಳೆ, ಪ್ರೀತಿಕಾ ವಾಗ್ಳೆ ಮುಂತಾದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಪ್ರಾಯೋಜಕರಾಗಿ ಮಾಜಿ ಜಿ.ಪಂ.ಸದಸ್ಯರಾದ ವಿಲ್ಸನ್ ರೋಡ್ರಿಗಸ್ ಮತ್ತು ವಿನಯಾ ಕುಂದರ್ ಹಾಗೂ ಕೋಡು ಸದಾನಂದ್ ಶೆಟ್ಟಿ ಅವರು ಸಹಕರಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News