Friday, March 1, 2024
Homeಸುದ್ದಿಕರಾವಳಿಕಾಪು : ಮನೆಯ ಹಂಚಿನಿಂದ ಹೊಡೆದು ಮಾರಣಾಂತಿಕ ಹಲ್ಲೆ

ಕಾಪು : ಮನೆಯ ಹಂಚಿನಿಂದ ಹೊಡೆದು ಮಾರಣಾಂತಿಕ ಹಲ್ಲೆ

ಕಾಪು: ಮನೆಯ ಹಿಂಬದಿಯ ಅತ್ತೆ ಮನೆಯ ಕೋಳಿಗಳು ತನ್ನ ಮನೆಯ ಕೈ ತೋಟವನ್ನು ಹಾಳು ಮಾಡುತ್ತಿರುವ ಬಗ್ಗೆ ಸುನೀಲ್ ಎಂಬವರು ತಮ್ಮ ಅತ್ತೆ ಬಳಿ ಹೇಳಿದಕ್ಕೆ ಭರತ್ ಎಂಬಾತ ಸುನಿಲ್ ಅವರಿಗೆ ಹಂಚಿನಿಂದ ಹೊಡೆದು ಹಲ್ಲೆ ಮಾಡಿರುವ ಘಟನೆ ಕಾಪುವಿನ ಏಣಗುಡ್ಡೆಯಲ್ಲಿ ನಡೆದಿದೆ.
ಈ ಬಗ್ಗೆ ಸುನೀಲ್ ಅವರು ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸುನೀಲ್ ಅವರ ಮನೆಯ ಹಿಂಭಾಗದಲ್ಲಿ ಅವರ ಅತ್ತೆ ಬೇಬಿಯವರ ಮನೆಯಿದ್ದು, ಅವರ ಮನೆಯಲ್ಲಿರುವ 15 ರಿಂದ 20 ಕೋಳಿಗಳು ಬೆಳಗ್ಗೆ ಗೂಡಿನಿಂದ ಬಿಟ್ಟ ಕೂಡಲೇ ಇವರ ಮನೆಯ ಕಂಪೌಂಡ ಹಾರಿ ಮನೆಯ ಜಾಗದಲ್ಲಿ ನೆಟ್ಟಿದ ತರಕಾರಿ ಗಿಡ ಹಾಗೂ ಬೀಜಗಳನ್ನು ಚಲ್ಲಾಪಿಲ್ಲಿ ಮಾಡುತ್ತಿತ್ತು‌ ಹಾಗೂ ಕೆಸರನ್ನು ಕೋಳಿಗಳು ಕಾಲಿನಿಂದ ಕೆದರಿ ಮನೆಯ ಸುತ್ತ ಗಲೀಜು ಮಾಡುತ್ತಿತ್ತು, ಈ ಬಗ್ಗೆ ನಿನ್ನೆ ಮದ್ಯಾಹ್ನದ ವೇಳೆ ಸುನೀಲ್ ಅವರು ಬೇಬಿ ರವರಲ್ಲಿ ತಿಳಿಸಿದ್ದರು.ಬಳಿಕ ಸಂಜೆ ವೇಳೆ ಸುನೀಲ್‌ ರವರು ಮನೆಯಲ್ಲಿ ಮಲಗಿದ್ದಾಗ ಇವರ ಅತ್ತೆಯ ಮಗ ಭರತನು ಸುನೀಲ್ ಅವರಿಗೆ ಬೈದು ಮನೆಯ ಕಂಪೌಂಡ ಮೇಲಿದ್ದ ಹಂಚಿನಿಂದ ಸುನಿಲ್‌ ರವರ ತಲೆಯ ಹಿಂಭಾಗಕ್ಕೆ ಹೊಡೆದು ಹಲ್ಲೆ ಮಾಡಿದ್ದಾನೆ. ಇದರಿಂದ ಸುನೀಲ್ ಅವರಿಗೆ ಗಾಯವಾಗಿದ್ದು ಉಡುಪಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಎಂಬುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News