Tuesday, April 23, 2024
Homeಸುದ್ದಿದೀಪಾವಳಿ ಹಬ್ಬದ ಪ್ರಯುಕ್ತ ಶಿರ್ವ ವಿನ್-ವೆಲ್ ಜಿಮ್ ನಲ್ಲಿ ವಿಶೇಷ ಆಫರ್!

ದೀಪಾವಳಿ ಹಬ್ಬದ ಪ್ರಯುಕ್ತ ಶಿರ್ವ ವಿನ್-ವೆಲ್ ಜಿಮ್ ನಲ್ಲಿ ವಿಶೇಷ ಆಫರ್!

ಶಿರ್ವ‌: ಶಿರ್ವದ ಪ್ರತಿಷ್ಟಿತ ವಿನ್ ವೆಲ್ ಜಿಮ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಸದಸ್ಯರಿಗೆ “ಪ್ರವೇಶ ಶುಲ್ಕ”ದಲ್ಲಿ ಸಂಪೂರ್ಣ ರಿಯಾಯಿತಿ ನೀಡಲಾಗಿದೆ. ಇದರ ಮೂಲಕ ಜಿಮ್ ಸೇರಲು ಇಚ್ಚಿಸುವ ಹೊಸ ಸದಸ್ಯರಿಗೆ ಯಾವುದೇ “ಪ್ರವೇಶ ಶುಲ್ಕ”ವಿಲ್ಲದೆ ಕೇವಲ ತಿಂಗಳ ಫೀಸ್ ಕಟ್ಟಿ ಸೇರಿಕೊಳ್ಳಬಹುದು. ಈ ಆಫರ್ ಅಕ್ಟೋಬರ್ 30ರ ವರೆಗೆ ಮಾತ್ರ ಲಭ್ಯವಿದ್ದು, ಹೊಸ ಗ್ರಾಹಕರು ಇದರ ಲಾಭ ಪಡೆಯಬಹುದಾಗಿದೆ.

ಜಿಮ್ ಮಾಡೋದ್ರಿಂದ ಆಗೋ ಕೆಲವು ಪ್ರಯೋಜನಗಳು:

ಏಕಾಗ್ರತೆಯನ್ನು ಹೆಚ್ಚುತ್ತದೆ
ನೀವು ಜಿಮ್​ಗೆ ಹೋದಾಗ ಅಲ್ಲಿ ತಾಲೀಮು ಮಾಡುವ ಪ್ರತಿಯೊಬ್ಬರೂ ತಮ್ಮ ಆರಾಮ ವಲಯದಿಂದ ಹೊರ ಬಂದು ಹೇಗೆ ಹೆಚ್ಚೆಚ್ಚು ತಾಲೀಮು ಮಾಡಬೇಕು ಎಂಬ ಅಂಶದ ಮೇಲೆ ಹೆಚ್ಚು ಗಮನಹರಿಸುತ್ತಾರೆ. ಇದು ದಿನವಿಡೀ ದೇಹದಲ್ಲಿ ನಿರ್ಮಾಣವಾಗುವ ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.  ಆಗ ಸ್ನಾಯುಗಳ ವಿಶ್ರಾಂತಿ, ಸಂತೋಷ ಮತ್ತು ಶಾಂತಿಯ ಭಾವನೆಗಳು ನಮ್ಮ ಅನುಭವಕ್ಕೆ ಬರುತ್ತದೆ.

ನೀವು ಚೆನ್ನಾಗಿ ಆಹಾರ ಸೇವಿಸುವುದು
ನಾವು ಉತ್ತಮವಾಗಿ ವ್ಯಾಯಾಮದ ಮೂಲಕ ದೇಹ ದಣಿಸಿದಾಗ  ನಮಗೆ ಬಲಶಾಲಿ ಎಂಬ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ, ನೀವು ಆಗ ಜಂಕ್ ಫುಡ್ ಗಳನ್ನು ತಿನ್ನುವ ಬದಲು ನಿಮ್ಮನ್ನು ಪೋಷಿಸುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಎಂಡಾರ್ಫಿನ್ ಗಳು, ಸೆರೊಟೋನಿನ್, ಡೋಪಮೈನ್ ಮತ್ತು ಆಕ್ಸಿಟೋಸಿನ್ ಇವೆಲ್ಲವೂ ಸಾಮಾನ್ಯವಾಗಿ ತಿಳಿದಿರುವ ಹಾರ್ಮೋನ್ ಗಳಾಗಿವೆ. ಆದ್ದರಿಂದ ಸ್ವಾಭಾವಿಕವಾಗಿ ಜಿಮ್​​ಗೆ ಹೊಗುವುದು ಮತ್ತು ನಿಮ್ಮ ಆರೋಗ್ಯದ ಬಗ್ಗೆ ಸಕಾರಾತ್ಮಕ ಭಾವನೆಯು ನಿಮ್ಮ ದೇಹಕ್ಕೆ ನೀವು ನೀಡುವ ಆಹಾರದಲ್ಲಿ ಉತ್ತಮ ಆಯ್ಕೆಗಳನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಚುರುಕುತನ ಬರುತ್ತದೆ
ಈ ತರಬೇತಿಯು ದೇಹ, ಹೃದಯ ಮತ್ತು ಮಾನಸಿಕ ಮಟ್ಟಗಳಲ್ಲಿ ನಡೆಯುತ್ತದೆ ಮತ್ತು ನಿಮ್ಮನ್ನು ಮಾನಸಿಕವಾಗಿ ಚುರುಕಾಗಿಡುವ ಮೂಲಕ ಹೆಚ್ಚಿನದನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸಮಯ ಮತ್ತು ಶಕ್ತಿ ಎರಡನ್ನೂ ಉದ್ದೇಶಪೂರ್ವಕವಾಗಿ ಆಪ್ಟಿಮೈಜೇಶನ್ ಮಾಡುವ ಈ ಅಭ್ಯಾಸವು ಖಂಡಿತವಾಗಿಯೂ ದೀರ್ಘಕಾಲೀನವಾಗಿರುವ ಆರೋಗ್ಯಕರ ಅಭ್ಯಾಸಗಳನ್ನು ರಚಿಸಲು ಸಹಾಯ ಮಾಡುತ್ತದೆ.

ನೆಗೆಟಿವ್ ಯೋಚನೆ ಕ್ಷೀಣಿಸುತ್ತದೆ
ವ್ಯಾಯಾಮ ಮಾಡುವುದರಿಂದಾಗಿ ನೆಗಟಿವ್ ಯೋಚನೆಗಳಿಂದ ನೀವು ಮುಕ್ತರಾಗಬಹುದು. ನಿಮ್ಮ ಜೀವನದಲ್ಲಿ ಧನಾತ್ಮಕ ಅಂಶಗಳೇ ಹೆಚ್ಚು ಒತ್ತು ಪಡೆಯುತ್ತದೆ.

ಮನಸ್ಸನ್ನು ಶಾಂತವಾಗಿರಿಸುತ್ತದೆ
ವ್ಯಾಯಾಮದ ಪ್ರಯೋಜನಗಳು ನಿಮ್ಮ ಮನಸ್ಸನ್ನು ಹೆಚ್ಚು ಶಾಂತ ಮತ್ತು ವಿಶ್ರಾಂತಿ ಸ್ಥಿತಿಗೆ ತರಲು ನಿಧಾನವಾಗಿ ಸಹಾಯ ಮಾಡುತ್ತದೆ. ಅಂತಹ ಶಾಂತ ಮನಸ್ಸು ದೇಹದ ದೃಢತೆಗೆ ಸಹಾಯ ಮಾಡುತ್ತದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News