Thursday, April 18, 2024
Homeಸುದ್ದಿಮಂಗಳೂರು ಹಾಗೂ ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಬಸ್ಸು ಸೇವೆ

ಮಂಗಳೂರು ಹಾಗೂ ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಬಸ್ಸು ಸೇವೆ

ಮಂಗಳೂರು, ಅ 22: ಮಂಗಳೂರು ಮತ್ತು ಮಣಿಪಾಲದಿಂದ ನಗರದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೆ.ಎಸ್.ಆರ್.ಟಿ.ಸಿ ಬಸ್ ಸೇವೆ ಅಕ್ಟೋಬರ್ 27 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ.

ಈ ಸಂಬಂಧ ಕೆಎಸ್‌ಆರ್‌ಟಿಸಿ, ಆರ್‌ಟಿಒ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತುಪಡಿಸಿ, ಸೇವೆಯು ಅಕ್ಟೋಬರ್ 27 ರಂದು ಪ್ರಾರಂಭವಾಗಲಿದೆ.ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್ ಸಾರಿಗೆ ಬೇಡಿಕೆ ಬಹಳ ಹಿಂದಿನಿಂದಲೂ ಇದೆ.ಹಲವು ವರ್ಷಗಳ ಹಿಂದೆಯೇ ಬಸ್ ಸಂಚಾರ ಆರಂಭಗೊಂಡಿದ್ದರೂ ಆದಾಯ ನಷ್ಟದ ಕಾರಣದಿಂದ ಕೈಬಿಡಲಾಗಿತ್ತು.

ಕೆಲ ತಿಂಗಳ ಹಿಂದೆ ಸಾರಿಗೆ ಸಚಿವ ಶ್ರೀರಾಮುಲು ಅವರು ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ನೀಡುವಂತೆ ಸೂಚನೆ ನೀಡಿದ್ದರು. ಮೈಸೂರು ಡಿಪೋದಿಂದ ಮಂಗಳೂರು ಡಿಪೋಗೆ ನಾಲ್ಕು ವೋಲ್ವೋ ಬಸ್‌ಗಳನ್ನು ಕಳುಹಿಸಲಾಗಿತ್ತು. ಆದರೆ, ಆರ್‌ಟಿಒ ಅನುಮತಿ ದೊರೆಯದ ಕಾರಣ ಸೇವೆ ಆರಂಭವಾಗಿರಲಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News