Monday, April 22, 2024
Homeಸುದ್ದಿನಟ ಚೇತನ್​ಗೆ ಮಸಿ ಬಳಿಯಲು ಪಯತ್ನ: 12 ಹಿಂದೂ ಕಾರ್ಯಕರ್ತರು ಪೊಲೀಸ್ ವಶಕ್ಕೆ!

ನಟ ಚೇತನ್​ಗೆ ಮಸಿ ಬಳಿಯಲು ಪಯತ್ನ: 12 ಹಿಂದೂ ಕಾರ್ಯಕರ್ತರು ಪೊಲೀಸ್ ವಶಕ್ಕೆ!

ಬೆಂಗಳೂರು ಅ. 21: ‘ಭೂತಕೋಲ ಹಿಂದೂ ಸಂಪ್ರದಾಯವಲ್ಲ’ ಎಂದು ಚೇತನ್ ಹೇಳಿಕೆ ವಿಚಾರ ಹಿನ್ನೆಲ್ಲೆ ಚೇತನ್​ಗೆ ಮಸಿ ಬಳಿಯಲು ತೆರಳುತ್ತಿದ್ದ 12 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವಂತಹ ಘಟನೆ ನಡೆದಿದೆ. ಇಂದು ಶೇಷಾದ್ರಿಪುರಂನಲ್ಲಿರುವ ನಟ ಚೇತನ್ ಮನೆ ಬಳಿ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಈ ವೇಳೆ ಮುಖಕ್ಕೆ ಮಸಿ ಬಳಿಯಲು ಮುಂದಾದಾಗ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಮಡಿಕೇರಿಯಲ್ಲಿ ನಟ ಚೇತನ್ ವಿರುದ್ಧ ಹಿಂದೂ ಯುವಸೇನೆ ಡಿ.ವೈಎಸ್​ಪಿಗೆ ದೂರು ನೀಡಿದ್ದಾರೆ. ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದ ಬಗ್ಗೆ ನಟ ಚೇತನ್​ ಟೀಕೆ ಮಾಡಿದ್ದು, ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎಂಬ ಹೇಳಿಕೆ ನೀಡಿದ್ದರು. ಚೇತನ್ ಹೇಳಿಕೆಯಿಂದ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಿದ್ದು, ನಟ ಚೇತನ್ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ಹಿಂದೂ ಯುವಸೇನೆ ಆಗ್ರಹಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News