Monday, July 15, 2024
Homeಸುದ್ದಿಉಡುಪಿ: ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

ಉಡುಪಿ: ನೀರಿನ ರಭಸಕ್ಕೆ ಕೊಚ್ಚಿ ಹೋದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

ಉಡುಪಿ, ಜು. 09: ಕಾರೊಂದು ರಭಸವಾಗಿ ಹರಿಯುವ ನೀರಿಗೆ ಕೊಚ್ಚಿ ಹೋಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಉಡುಪಿಯ ಕನ್ನರ್ಪಾಡಿ-ಕಡೇಕಾರ್ ರಸ್ತೆಯ ಬಳಿ ಸಂಭವಿಸಿದೆ.

ಭಾರೀ ಮಳೆಯಿಂದಾಗಿ ರಸ್ತೆಯು ಸಂಪೂರ್ಣ ಜಲಾವೃತಗೊಂಡಿತ್ತು. ಕಾರು ರಭಸವಾಗಿ ನೀರು ಹರಿಯುವ ಈ ರಸ್ತೆಯಲ್ಲಿ ಸಾಗಿದೆ. ನೀರಿನ ಹರಿವಿನ ತೀವ್ರತೆಯಿಂದ ಕಾರು ಮುಳುಗಿದ್ದು, ಈ ಅವಘಡ ಸಂಭವಿಸಿದೆ.

ಇನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News