ರಾಯಚೂರು : ಪ್ರೇಮ ವೈಫಲ್ಯಕ್ಕೆ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕನಸಾವಿಯಲ್ಲಿ ನಡೆದಿದೆ.
22 ವರ್ಷದ ಸಂತೋಷ ಆತ್ಮಹತ್ಯೆಗೆ ಮಾಡಿಕೊಂಡ ಯುವಕ.
ಸಂತೋಷ್ ಮುದಗಲ್ ಪಟ್ಟಣ ಸಮೀಪದ ಕನಸಾವಿ ಗ್ರಾಮದನಾಗಿದ್ದು, ಮನೆಯಲ್ಲಿರೋ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೊಬೈಲ್ ವಾಟ್ಸಪ್ನಲ್ಲಿ ಸ್ಟೇಟಸ್ ಹಾಕಿ ಬಳಿಕ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು ಸತ್ತರು ಪ್ರೀತಿಗೊಸ್ಕರ, ನಾನು ಒಬ್ಬ ಹುಚ್ಚು ಪ್ರೇಮಿ ಎಂದು ಹೇಳಿಕೊಂಡಿದ್ದಾನೆ.
ಸಂತೋಷ್ ಅಣ್ಣನ ಹೆಂಡ್ತಿ ತಂಗಿಯನ್ನೇ ಪ್ರೀತಿ ಮಾಡುತ್ತಿದ್ದನು. ಮದುವೆಗೆ ಒಪ್ಪದಿದ್ದಾಗ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮದುವೆ ನಿರಾಕರಣೆ.. ವಾಟ್ಸಪ್ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ
