Tuesday, April 16, 2024
Homeಸುದ್ದಿಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ, ರೀಲ್ಸ್ ಎಷ್ಟು ಗಂಟೆಗೆ ಹಾಕಿದರೆ ಹೆಚ್ಚು ವೈರಲ್ ಆಗುತ್ತೆ?

ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ, ರೀಲ್ಸ್ ಎಷ್ಟು ಗಂಟೆಗೆ ಹಾಕಿದರೆ ಹೆಚ್ಚು ವೈರಲ್ ಆಗುತ್ತೆ?

ಟಿಕ್​ಟಾಕ್ (TikTok) ನಿಷೇಧವಾದ ಬಳಿಕ ಭಾರತದಲ್ಲಿ ಇನ್​ಸ್ಟಾ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು. ಇದರಲ್ಲಿರುವ ರೀಲ್ಸ್‌ ಆಯ್ಕೆಗೆ ಜನರು ಮನಸೋತರು. ಟಿಕ್‌ಟಾಕ್‌ ಬಳಿಕ ಈಗ ಹೆಚ್ಚಿನ ಜನರು ಇನ್‌ಸ್ಟಾಗ್ರಾಮ್‌ ರೀಲ್ಸ್​ಗೆ ಅಂಟಿಕೊಂಡು ಬಿಟ್ಟಿದ್ದಾರೆ. ಇದಕ್ಕೆ ತಕ್ಕಂತೆ ಇನ್‌ಸ್ಟಾಗ್ರಾಮ್‌ (Instagram) ತನ್ನ ರೀಲ್ಸ್‌ನಲ್ಲಿ ಹಲವು ಆಕರ್ಷಕ ಫೀಚರ್​ಗಳನ್ನು ಕೂಡ ಪರಿಚಯಿಸುತ್ತಾ ಬರುತ್ತಿದೆ.

ಆದರೆ, ಕೆಲವರು ತಮ್ಮ ಇನ್​ಸ್ಟಾದಲ್ಲಿ ಫೋಟೋ, ವಿಡಿಯೋ ಎಷ್ಟೇ ಹಾಕಿದರೂ ಅದಕ್ಕೆ ಲೈಕ್ಸ್, ಕಮೆಂಟ್ ಬರುವುದೇ ಇಲ್ಲ. ಹಾಗಾದರೆ ನಿಮ್ಮ ಪೋಸ್ಟ್​ಗೆ ಹೆಚ್ಚು ಲೈಕ್ಸ್, ವೀವ್ಸ್, ಕಮೆಂಟ್ ಬರಬೇಕು ಅಂದುಕೊಂಡಿದ್ದರೆ ಇಲ್ಲಿದೆ ನೋಡಿ ಟಿಪ್ಸ್.

ನೀವು ಫೇಸ್​ಬುಕ್ ಖಾತೆ ಹೊಂದಿದ್ದರೆ ಮೊದಲು ಇನ್‌ಸ್ಟಾಗ್ರಾಂಗೆ ಲಿಂಕ್ ಮಾಡಿ. ಯಾಕೆಂದರೆ ನೀವು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಚಿತ್ರಗಳು, ವಿಡಿಯೋಗಳಲ್ಲದೆ, ನಿಮ್ಮ ಸ್ಟೋರಿಗಳನ್ನು ಫೇಸ್​ಬುಕ್​ನಲ್ಲಿ ಕೂಡ ಶೇರ್ ಮಾಡಿಕೊಳ್ಳಬಹುದು. ಫೇಸ್​ಬುಕ್ ತಾಣದಲ್ಲಿರುವ ಯಾವುದೇ ಸ್ನೇಹಿತರು ಇನ್​ಸ್ಟಾಗ್ರಾಮ್ ಸೇರಿದಾಗ ನಿಮಗೂ ನೋಟಿಫಿಕೇಶನ್ ಬರುತ್ತಾ ಇರುತ್ತದೆ. ಹೀಗಾಗಿ ಅವರ ಬಳಿ ನಿಮ್ಮನ್ನ ಫಾಲೋ ಮಾಡುವಂತೆ ಕೂಡ ಹೇಳಬಹುದು.

ಈಗ ಇನ್​ಸ್ಟಾಗ್ರಾಮ್ ಸಾಕಷ್ಟು ಅಪ್ಡೇಟ್ ಆಗಿದ್ದು, ನೀವು ಯಾವುದೇ ಫೋಟೋ, ವಿಡಿಯೋ ಹಂಚಿಕೊಂಡರೆ ಫೇಸ್​ಬುಕ್​ನಲ್ಲಿ ಅಟೋಮೆಟಿಕ್ ಶೇರ್ ಆಗುವಂತಹ ಆಯ್ಕೆ ಕೂಡ ಇದೆ.ಇನ್ನು ಇನ್​ಸ್ಟಾಗ್ರಾಮ್​ನಲ್ಲಿ ನೀವು ಯಾವುದೇ ಫೈಲ್ ಅನ್ನು ಶೇರ್ ಮಾಡುವಾಗ ಸರಿಯಾದ ಸಮಯಕ್ಕೆ ಮಾಡಿ.

ಒಂದೇ ಬಾರಿಗೆ 2, 3 ವಿಡಿಯೋ ಹಂಚಿಕೊಂಡರೆ ಲೈಕ್ಸ್, ಕಮೆಂಟ್ ಹಾಗೂ ಹೆಚ್ಚು ರೀಚ್ ಕೂಡ ಆಗುವುದಿಲ್ಲ. ಈ ಬಗ್ಗೆ ವೆಬ್ ತಾಣ ಗಿಜ್​ಬಾಟ್ ವರದಿ ಮಾಡಿದ್ದು ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳಲು ದಿನದಲ್ಲಿ ಯಾವುದು ಸರಿಯಾದ ಸಮಯ ಎಂದು ಹೇಳಿದೆ.

ಇವರು ಹೇಳಿರುವ ಪ್ರಕಾರ ಸೋಮವಾರ ಮಧ್ಯಾಹ್ನ 3:30, ಸಂಜೆ 7:30 ಹಾಗೂ ಬೆಳಗ್ಗೆ 7:30 ಉತ್ತಮ ಸಮಯವಂತೆ. ಅಂತೆಯೆ ಮಂಗಳವಾರ ಫೋಟೋ ಅಥವಾ ರೀಲ್ಸ್ ಹಂಚಿಕೊಳ್ಳುವ ಪ್ಲಾನ್​ನಲ್ಲಿದ್ದರೆ ನೀವು 11:30 am, 1:30 am, 6:30 am. ಬುಧವಾರ- 4:30 pm, 5:30 pm, 8:30 am, ಗುರುವಾರ- 6:30 pm, 9:30 am, 4:30 am (ಮುಂದಿನ ದಿನ), ಶುಕ್ರವಾರ- 2:30 pm, 10:30 pm, 12:30 am (ಮುಂದಿನ ದಿನ), ಶನಿವಾರ- 8:30 pm, 4:30 am (ಮುಂದಿನ ದಿನ), 5:30 am (ಮುಂದಿನ ದಿನ), ಭಾನುವಾರ- 4:30 pm, 5:30 pm, 1:30 am (ಮುಂದಿನ ದಿನ).

ಒಂದೇ ರೀತಿಯ ಫೋಟೋವನ್ನು ಪುನಃ ಪೋಸ್ಟ್ ಮಾಡಬೇಡಿ. ಯಾವುದಾದರೂ ಒಂದು ಪೋಟೊ ಚೆನ್ನಾಗಿದ್ದರೆ, ಆ ಫೋಟೋವನ್ನೇ ಹತ್ತು ಬಾರಿ ಇನ್‌ಸ್ಟಾಗ್ರಾಂನಲ್ಲಿ ಫೋಸ್ಟ್ ಮಾಡಬೇಡಿ. ಗಮನ ಸೆಳೆಯುವಂತಹ ಗುಣಮಟ್ಟದ ಚಿತ್ರಗಳನ್ನು ಮಾತ್ರ ಶೇರ್ ಮಾಡಿ. ದಿನಕ್ಕೆ ಹೆಚ್ಚೆಂದರೆ 2 ರಿಂದ 3 ಫೋಟೋಗಳನ್ನು ಶೇರ್ ಮಾಡುವುದು ಉತ್ತಮ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News