Friday, April 19, 2024
Homeಸುದ್ದಿಪ್ರಧಾನಿ ನರೇಂದ್ರ ಮೋದಿ ಕಾಂತಾರ ನೋಡ್ತಾರೆ ಅನ್ನೋದು ಸುಳ್ಳು ಸುದ್ದಿ; ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್

ಪ್ರಧಾನಿ ನರೇಂದ್ರ ಮೋದಿ ಕಾಂತಾರ ನೋಡ್ತಾರೆ ಅನ್ನೋದು ಸುಳ್ಳು ಸುದ್ದಿ; ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್

ಪ್ರಧಾನಿ ನರೇಂದ್ರ ಮೋದಿ ನವೆಂಬರ್ ತಿಂಗಳಲ್ಲಿ ಕರ್ನಾಟಕಕ್ಕೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಅವರು ರಿಷಬ್ ಶೆಟ್ಟಿ ಹಾಗೂ ತಂಡದವರ ಜತೆ ‘ಕಾಂತಾರ’ ಸಿನಿಮಾ ನೋಡಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು.

ಯಾವುದಾದರೂ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡರೆ ಆ ಚಿತ್ರದ ಬಗ್ಗೆ ಹಾಗೂ ತಂಡದ ಬಗ್ಗೆ ಒಂದಷ್ಟು ವದಂತಿ ಹುಟ್ಟಿಕೊಳ್ಳೋದು ಸಾಮಾನ್ಯ. ಈಗ ‘ಕಾಂತಾರ’ (Kantara Movie) ಚಿತ್ರಕ್ಕೂ ಅದೇ ಸಮಸ್ಯೆ ಶುರುವಾಗಿದೆ. ‘ಕಾಂತಾರ’ ಚಿತ್ರದ ಬಗ್ಗೆ ಹಲವು ಸುಳ್ಳು ಸುದ್ದಿಗಳು ಹಬ್ಬುತ್ತಿವೆ. ‘ಕಾಂತಾರ’ ಚಿತ್ರವನ್ನು ಪ್ರಧಾನಿ ನರೇಂದ್ರ ಮೊದಿ (PM Narendra Modi) ಅವರು ವೀಕ್ಷಿಸಲಿದ್ದಾರೆ ಎಂಬ ಸುದ್ದಿಯನ್ನು ಕೆಲವರು ಹಬ್ಬಿಸಿದ್ದರು. ಇದು ಶುದ್ಧ ಸುಳ್ಳು ಎಂಬುದನ್ನು ಹೊಂಬಾಳೆ ಫಿಲ್ಮ್ಸ್ ಸ್ಪಷ್ಟಪಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ನವೆಂಬರ್ ತಿಂಗಳಲ್ಲಿ ಕರ್ನಾಟಕಕ್ಕೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಅವರು ರಿಷಬ್ ಶೆಟ್ಟಿ ಹಾಗೂ ತಂಡದವರ ಜತೆ ‘ಕಾಂತಾರ’ ಸಿನಿಮಾ ನೋಡಲಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಇದನ್ನೇ ನಂಬಿ ಕೆಲ ಮಾಧ್ಯಮಗಳು ಸುದ್ದಿ ಮಾಡಿದವು. ಈ ಸುದ್ದಿ ಕೇಳಿ ರಿಷಬ್ ಅಭಿಮಾನಿಗಳು ಹಿಗ್ಗಿದರು. ಆದರೆ, ಇದು ಸುಳ್ಳು ಅನ್ನೋದು ಗೊತ್ತಾಗಿದೆ.

‘ಪ್ರಧಾನಿ ಮೋದಿ ಅವರು ಸಿನಿಮಾ ನೋಡುತ್ತಾರೆ ಅನ್ನುವ ಸುದ್ದಿ ಫೇಕ್​’ ಎಂದು ಹೊಂಬಾಳೆ ಫಿಲ್ಮ್ಸ್​ ಹೇಳಿದೆ. ಈ ಬಗ್ಗೆ ಇ-ಟೈಮ್ಸ್ ವರದಿ ಮಾಡಿದೆ. ಈ ಮೂಲಕ ಅಕ್ಟೋಬರ್ 19ರಿಂದ ಹರಿದಾಡುತ್ತಿರುವ ವದಂತಿಗೆ ಬ್ರೇಕ್ ಬಿದ್ದಿದೆ.ಅಲ್ಲು ಅರವಿಂದ್ ಜತೆ ರಿಷಬ್ ಸಿನಿಮಾ‘ಕಾಂತಾರ’ ಚಿತ್ರವನ್ನು ತೆಲುಗಿನಲ್ಲಿ ಅಲ್ಲು ಅರವಿಂದ್ ಹಂಚಿಕೆ ಮಾಡಿದ್ದಾರೆ. ಈ ಸಿನಿಮಾವನ್ನು ಅವರು 3 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು ಎನ್ನಲಾಗಿದೆ. ಈಗ ಚಿತ್ರ ಒಳ್ಳೆಯ ಬಿಸ್ನೆಸ್ ಮಾಡುತ್ತಿದೆ. ಹೀಗಾಗಿ, ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್​ಗೆ ಒಳ್ಳೆಯ ಲಾಭ ಆಗಿದೆ. ಇದೇ ಖುಷಿಯಲ್ಲಿ ಅವರು ರಿಷಬ್ ಜತೆ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕೆ ರಿಷಬ್ ಓಕೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News