Thursday, April 18, 2024
Homeಸುದ್ದಿಕಾಂತಾರ effect! ದೈವ ನರ್ತಕರಿಗೆ 2 ಸಾವಿರ ರೂಪಾಯಿ ಮಾಸಾಶನ ನೀಡಲು ನಿರ್ಧಾರ: ಸಚಿವ ಸುನಿಲ್...

ಕಾಂತಾರ effect! ದೈವ ನರ್ತಕರಿಗೆ 2 ಸಾವಿರ ರೂಪಾಯಿ ಮಾಸಾಶನ ನೀಡಲು ನಿರ್ಧಾರ: ಸಚಿವ ಸುನಿಲ್ ಕುಮಾರ್

ಕರಾವಳಿ ಭಾಗದಲ್ಲಿ ದೈವಾರಾಧನೆಗೆ ಹೆಚ್ಚು ಪ್ರಾಮುಖ್ಯತೆ ನೀಡುವ ದೈವ ನರ್ತನ ಮಾಡುವ ಬಡ ಕುಟುಂಬಗಳ ಬಹಳ ದಿನಗಳ ಬೇಡಿಕೆಗೆ ಸರ್ಕಾರ ಅಸ್ತು ಎಂದಿದೆ. ದೈವ ನರ್ತಕರ ಕುಟುಂಬಕ್ಕೆ ಸರ್ಕಾರ ಈಗ ಆಶಾದಾಯಕ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಸರ್ಕಾರ ದೈವಕ್ಕೆ ಕಟ್ಟುವ ಅಂದರೆ ದೈವ ನರ್ತನ ಮಾಡುವವರಿಗೆ ಮಾಸಾಶನ ಕೊಡಲು ತೀರ್ಮಾನ ಮಾಡಿದೆ.

ಪಂಬದರು, ನಲಿಕೆಯವರು, ಪರವರಿಗೆ ಅಂದರೆ ಇವರೆಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರುತ್ತಾರೆ. ಇವರ ಅಭಿವೃದ್ಧಿಗಾಗಿ ಈ ಕ್ರಮವನ್ನು ತರಲಾಗಿದೆ.ದೈವ ನರ್ತನ ಮಾಡುವವರಿಗೆ ಮಾಸಾಶನ ಕೊಡಲು ತೀರ್ಮಾನ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಘೋಷಣೆ ಮಾಡಿದ್ದಾರೆ.

60 ವರ್ಷ ಮೇಲ್ಪಟ್ಟ ದೈವನರ್ತನ ಮಾಡುವವರಿಗೆ ಮಾಸಾಶನ ನೀಡಲು ಈ ಯೋಜನೆಯನ್ನು ಹಾಕಿಕೊಂಡಿದೆ. ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ಕೊಡಲು ನಿರ್ಧಾರ ಮಾಡಲಾಗಿದೆ.

ಕನ್ನಡದಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿದ ಕಾಂತಾರ ಸಿನಿಮಾ, ಅನೇಕ ಕಡೆಗಳಲ್ಲಿ ಪ್ರಶಂಸೆಗೆ ಕಾರಣವಾಗಿದೆ. ಈ ಮೂಲಕ ದೈವ ನರ್ತಕ ಕಷ್ಟಗಳನ್ನು ಅಥವಾ ಆ ಒಂದು ಸಮುದಾಯದ ಜನರ ಕಷ್ಟಗಳನ್ನು ತಿಳಿಸುವ ಪ್ರಯತ್ನವನ್ನು ಈ ಸಿನಿಮಾ ಮಾಡಿತ್ತು. ಈ ಸಿನಿಮಾವನ್ನು ನೋಡಿದ ಅನೇಕ ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಒಳ್ಳೆಯ ಯೋಜನೆಗಳನ್ನು ತರಬೇಕು ಮತ್ತು ಅವರಿಗಾಗಿ ಮಾಸಾಶನ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದರು, ಇಂದಿಗೂ ಈ ಬಗ್ಗೆ ಸರ್ವಾಜನಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಮಾತುಗಳು ಕೇಳಿ ಬರುತ್ತಿದೆ. ಇದೀಗ ಸರ್ಕಾರ ದೈವ ನರ್ತಕರ ಕಷ್ಟಕ್ಕೆ ಮತ್ತು ಬೇಡಿಕೆಯನ್ನು ಒಪ್ಪಿಕೊಂಡು ಮತ್ತು ಈ ಸಿನಿಮಾದ ಮೂಲಕ ಬಂದ ಒತ್ತಡಕ್ಕೆ ದೈವ ನರ್ತನ ಮಾಡುವವರಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲು ನಿರ್ಧಾರ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News