ಮಲ್ಪೆ ಬೀಚ್‌ನಲ್ಲಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಪ್ರವಾಸಿಗರಿಗೆ ಅಪಾಯದ ಎಚ್ಚರಿಕೆ

ಉಡುಪಿ : ಭಾನುವಾರ ದಿನವಿಡೀ ಮಳೆ ಸುರಿದರೂ ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರ ದಂಡೇ ನೆರೆದಿತ್ತು. ಮುಂಗಾರು ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿದ್ದರೂ ಪ್ರವಾಸಿಗರು ಜೀವ ರಕ್ಷಕರ ಎಚ್ಚರಿಕೆಗೆ ಕಿವಿಗೊಡದೆ ಬೀಚ್‌ನ ದಕ್ಷಿಣ ಭಾಗದಲ್ಲಿ ನೀರಿಗೆ ಇಳಿಯುತ್ತಿರುವುದು ಕಂಡುಬಂದಿದೆ.


ಪ್ರವಾಸಿಗರು ಅಪಾಯಕ್ಕೆ ಆಹ್ವಾನ ನೀಡದಂತೆ ನೆಟ್ ಹಾಕಲಾಗಿದ್ದು, ಎಚ್ಚರಿಕೆ ಫಲಕಗಳನ್ನೂ ಹಾಕಲಾಗಿದೆ. ಆದಾಗ್ಯೂ, ಅನೇಕರು ಸೀ ವಾಕ್ ವೇ ಬಳಿ ನೀರಿನಲ್ಲಿ ಮುಳುಗುತ್ತಿರುವುದು ಕಂಡುಬಂದಿದೆ.

ಮಳೆಗಾಲದಲ್ಲಿ ಪ್ರವಾಸಿಗರು ನೀರು ಪಾಲಾಗುವುದನ್ನು ತಡೆಯಲು ಸ್ಥಳೀಯ ಪೊಲೀಸರನ್ನು ನಿಯೋಜಿಸುವಂತೆ ಜೀವರಕ್ಷಕರು ಮನವಿ ಮಾಡಿದ್ದಾರೆ.

Scroll to Top