Tuesday, July 23, 2024
Homeಸುದ್ದಿಕರಾವಳಿತ್ರಾಸಿ ಅಂಬಾ ಟಿವಿ ಸೆಂಟರ್ ನಲ್ಲಿ ಬೆಂಕಿ ಅವಘಡ : ಒಂದು ಕೋಟಿಗೂ ಅಧಿಕ ನಷ್ಟ

ತ್ರಾಸಿ ಅಂಬಾ ಟಿವಿ ಸೆಂಟರ್ ನಲ್ಲಿ ಬೆಂಕಿ ಅವಘಡ : ಒಂದು ಕೋಟಿಗೂ ಅಧಿಕ ನಷ್ಟ

ಕುಂದಾಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಕುಂದಾಪುರ ತಾಲೂಕಿನ ತ್ರಾಸಿ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಅಂಬಾ ಟಿವಿ ಸೆಂಟರ್ ಬೆಂಕಿಗಾಹುತಿಯಾಗಿದೆ.

ರವಿವಾರ ರಾತ್ರಿ 10:30ಕ್ಕೆ ಸುಧಾಕರ ಶೆಟ್ಟಿ ಎಂಬವರ ಮಾಲಕತ್ವದ ಅಂಬಾ ಟಿವಿ ಸೆಂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದ ಸೆಂಟರ್ನ ಒಳಗಿದ್ದ ಎಲ್ಲಾ ಸ್ವತ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ. ಅದೇ ರೀತಿ ಮೂರು ಲಕ್ಷ ರೂ ನಗದು ಕೂಡ ಬೆಂಕಿಗೆ ಆಹುತಿಯಾಗಿದೆ ಒಟ್ಟಾರೆ ಈ ದುರಂತದಿಂದ ಒಂದು ಕೋಟಿಗೂ ಅಧಿಕ ರೂ. ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು, ಅಗ್ನಿಶಾಮಕ ದಳದವರು, ಗಂಗೊಳ್ಳಿ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು, ಬೆಂಕಿ ನಂದಿಸಲು ಹರಸಾಹಸಪಟ್ಟರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News