Saturday, July 27, 2024
Homeಸುದ್ದಿಕರಾವಳಿಕೊನೆಗೂ ಪ್ರತ್ಯಕ್ಷವಾದ ಪ್ರಜ್ವಲ್ ರೇವಣ್ಣ ; ವಾಪಸ್ ಬರೋದು ಯಾವಾಗ?

ಕೊನೆಗೂ ಪ್ರತ್ಯಕ್ಷವಾದ ಪ್ರಜ್ವಲ್ ರೇವಣ್ಣ ; ವಾಪಸ್ ಬರೋದು ಯಾವಾಗ?

ಹಾಸನದಲ್ಲಿ ವೈರಲ್ ಆದ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಪ್ರತ್ಯಕ್ಷವಾಗಿದ್ದಾರೆ. ಒಂದು ತಿಂಗಳ ಬಳಿಕ ಪ್ರಜ್ವಲ್ ರೇವಣ್ಣ ಅವರು ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿದೇಶದಿಂದ ವೀಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ರೇವಣ್ಣ ಅವರು ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ.

ವೀಡಿಯೋದಲ್ಲಿ ಮಾತನಾಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು, ನನ್ನ ತಂದೆ-ತಾಯಿ, ತಾತನಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಇದೇ ವೇಳೆ ರಾಜ್ಯದ ಜನತೆಯಲ್ಲಿ ಕ್ಷಮೆ ಕೇಳಿರುವ ಪ್ರಜ್ವಲ್ ರೇವಣ್ಣ ಅವರು ಇದೇ ಮೇ.31ಕ್ಕೆ ನಾನು ಎಸ್ಐಟಿ ಮುಂದೆ ಹಾಜರಾಗುತ್ತೇನೆ ಎಂದು ವಿಡಿಯೋ ಮೂಲಕ ಪ್ರಜ್ವಲ್ ರೇವಣ್ಣ ಮಾಹಿತಿ ನೀಡಿದ್ದಾರೆ. ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಎದುರಿಸಲು ನಾನು ಸಿದ್ಧ ಎಂದಿದ್ದಾರೆ.

ವಿಡಿಯೋದಲ್ಲಿ ನನ್ನ ತಂದೆ, ತಾಯಿ, ದೇವೇಗೌಡರು, ಕುಮಾರಣ್ಣರ ಕ್ಷಮೆ ಕೇಳ್ತೇನೆ ಎಂದಿರುವ ಪ್ರಜ್ವಲ್ ರೇವಣ್ಣ ಅವರು ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ಮಾಡಿದ್ದಾರೆ. ಕೆಲ ಶಕ್ತಿಗಳು ಒಟ್ಟಾಗಿ ಸೇರಿಕೊಂಡು ನನ್ನ ವಿರುದ್ದ ಪಿತೂರಿ ಮಾಡಿದ್ರು. ಕಾಂಗ್ರೆಸ್ ನಾಯಕರು, ರಾಹುಲ್‌ ಗಾಂಧಿ ನನ್ನ ವಿರುದ್ದ ಬಹಿರಂಗವಾಗಿ ಮಾತಾಡಿದ್ದರು. ಈ ಮಾಹಿತಿಯನ್ನು ನೋಡಿ ನಾನು ಡಿಪ್ರೆಶನ್‌ಗೆ ಹೋಗಿ ಐಸೋಲೇಷನ್‌ಗೆ ಒಳಗಾಗಿದ್ದೆ ಎಂದಿದ್ದಾರೆ.

ಪ್ರಜ್ವಲ್‌ ವಿಡಿಯೋದಲ್ಲಿ ಇರೋದೇನು?

ಎಲ್ಲರಿಗೂ ನಮಸ್ಕಾರ.. ಮೊದಲನೆಯದಾಗಿ ನನ್ನ ತಂದೆ ತಾಯಿಗೆ, ತಾತನಿಗೆ, ನನ್ನ ಕುಮಾರಣ್ಣನಿಗೆ, ನಾಡಿನ ಜನತೆಗೆ ಮತ್ತು ನನ್ನ ಎಲ್ಲ ಕಾರ್ಯತರ್ಕರಿಗೆ ಕ್ಷಮಾಪಣೆ ಕೇಳಲು ಬಂದಿದ್ದೇನೆ. ನಾನು ಫಾರಿನ್ನಲ್ಲಿ  ಎಲ್ಲಿ ಇದ್ದೇನೆ ಅಂತ ಸರಿಯಾಗಿ ಮಾಹಿತಿ ನೀಡಿರಲಿಲ್ಲ. 26ರ ಚುನಾವಣೆ ನಡೆದಂತ ಸಂದರ್ಭದಲ್ಲಿ ನನ್ನ ಮೇಲೆ ಯಾವುದೇ ಕೇಸ್ ದಾಖಲಾಗಿ ಇರಲಿಲ್ಲ. ಎಸ್ಐಟಿ ಕೂಡ ರಚನೆಯಾಗಿರಲಿಲ್ಲ. 26ರಂದು ವಿದೇಶಕ್ಕೆ ಹೋಗುವ ಬಗ್ಗೆ ಪ್ರೀ ಪ್ಲಾನ್ ಆಗಿತ್ತು. ಹಾಗಾಗಿ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ.

ನಾನು ವಿದೇಶದಲ್ಲಿದ್ದಾಗ ನ್ಯೂಸ್ ನೋಡಿ ನನ್ನ ಮೇಲೆ ಆರೋಪ ಬಂದಿರುವುದು ಕಂಡುಬಂದಿದೆ. ಎಸ್ಐಟಿ ನೋಟಿಸ್ಗೂ ಕೂಡ ನಾನು ಟ್ವೀಟ್ ಹಾಗೂ ವಕೀಲರ ಮುಖಾಂತರ 7 ದಿನ ಸಮಯ ಹೇಳಿದ್ದೆ. ಇದಾದ ನಂತರ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಸೇರಿ ಎಲ್ಲ ವೇದಿಕೆ ಮೇಲೆ ಈ ವಿಚಾರದ ಬಗ್ಗೆ ಮಾತನಾಡಲು ಶುರು ಮಾಡಿದ್ದರು.

ಇದನ್ನು ನೋಡಿ, ಕೇಳಿ ನಾನು ಡಿಪ್ರೆಶನ್ಗೆ ಹೋಗಬೇಕಾಯಿತು. ಹಾಗಾಗಿ ನಾನು ಮೊದಲನೆಯದಾಗಿ ಕ್ಷಮೆ ಕೇಳಿದ್ದೇನೆ. ಹಾಸನದಲ್ಲಿ ಕೂಡ ಕೆಲವರು ಸೇರಿಕೊಂಡು ರಾಜಕೀಯ ಪಿತೂರಿ ಮಾಡುವಂತ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಾನು ಬೆಳೆಯುತ್ತಿರುವುದನ್ನು ನೋಡಿದ ಅವರು ಕೆಲ ಕೇಸ್ಗಳಲ್ಲಿ ನನ್ನನ್ನು ಭಾಗಿ ಮಾಡಿದ್ದಾರೆ.

ಹೀಗಾಗಿ ಯಾರು ಕೂಡ ಇದರ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ. ನಾನೇ ಮೇ 31ನೇ ತಾರೀಖು ಶುಕ್ರವಾರದಂದು ಎಸ್ಐಟಿ ಮುಂದೆ ಬಂದು ಸರಿಯಾಗಿ ಉತ್ತರ ನೀಡುತ್ತೇನೆ. ಹಾಗೇ ನ್ಯಾಯಲಯದ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿ ಕೂಡ ನನ್ನ ಮೇಲೆ ಇರುವ ಸುಳ್ಳು ಪ್ರಕರಣಗಳಿಂದ ಆಚೆ ಬರುವಂತ ಕೆಲಸ ಮಾಡುತ್ತೇನೆ. ದೇವರ, ಜನರ ಹಾಗೂ ಕುಟುಂಬಸ್ಥರ ಆರ್ಶಿವಾದ ನನ್ನ ಮೇಲೆ ಇರಲಿ. ಮೇ 31ನೇ ತಾರೀಖು ಶುಕ್ರವಾರದಂದು ಬಂದ ಕೂಡಲೇ ಇದಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತೇನೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News