ಶಿರ್ವ: ಪಡುಬೆಳ್ಳೆ ಪಾಂಬೂರು ಮಾನಸ ಶಾಲೆಯ ಬಳಿ ವಾಸವಾಗಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಭೀಮಣಿ ಬಾಯಿ ಆಲಿಯಾಸ್ ಲಕ್ಷ್ಮೀ (67) ಮೇ. 18 ರಿಂದ ನಾಪತ್ತೆಯಾಗಿರುವ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ಭೀಮಣಿ ಬಾಯಿ ಮೇ. 5 ರಂದು ತನ್ನ ಸ್ವಂತ ಊರಾದ ಶಿವಮೊಗ್ಗಕ್ಕೆ ಒಬ್ಬರೇ ತೆರಳಿ ಪುತ್ರನ ಮನೆಯಲ್ಲಿ ವಾಸವಾಗಿದ್ದರು. ಮೇ.18ರಂದು ಬೆಳಗ್ಗೆ ಈಕೆಯನ್ನು ಪುತ್ರ ಭದ್ರಾವತಿಯ ಗೊಂದಿ ಕೈಮರ ಬಸ್ ನಿಲ್ದಾಣದಿಂದ ಬಸ್ ಹತ್ತಿಸಿ ಉಡುಪಿಗೆ ಕಳುಹಿಸಿ ಕೊಟ್ಟಿದ್ದರು. ಮಧ್ಯಾಹ್ನ 1-55ಕ್ಕೆ ಬಸ್ ಉಡುಪಿಗೆ ತಲುಪಿದ್ದು, ಭೀಮಣಿ ಬಾಯಿ ಪಾಂಬೂರಿನ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಕಾಣೆಯಾದ ಬಗ್ಗೆ ಸಂಬಂಧಿಕರ ಮನೆ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದ್ದು,ಪತ್ತೆಯಾಗಿರುವುದಿಲ್ಲ ಎಂದು ಪುತ್ರ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.