ಉಡುಪಿ: ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಯುವಕರಿಂದ ಮಾರಣಾಂತಿಕ ಹಲ್ಲೆ

ಉಡುಪಿ, ಮೇ. 18: ತಡರಾತ್ರಿ ಪೆಟ್ರೋಲ್ ಹಾಕದೇ ಇದ್ದದ್ದಕ್ಕೆ ಬಂಕ್ ಸಿಬ್ಬಂದಿ ಮೇಲೆ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಡುಪಿ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ನಡೆದಿದೆ.

ಪ್ರದೀಪ್ ಕುಮಾರ್ (26) ಹಲ್ಲೆಗೆ ಒಳಗಾದ ಬಂಕ್ ಸಿಬ್ಬಂದಿ.

ಮಧ್ಯರಾತ್ರಿ ಪೆಟ್ರೋಲ್ ಹಾಕಲು ಎರಡು ಬೈಕ್ ಗಳಲ್ಲಿ ಯುವಕರ ಬಂಕ್ ಗೆ ಬಂದಿದ್ದಾರೆ. ಈ ವೇಳೆ ಯುವಕರು ಪೆಟ್ರೋಲ್ ಹಾಕಲು ಹೇಳಿದಾಗ ಬಂಕ್ ಬಂದ್ ಆಗಿದೆ ಎಂದು ಸಿಬ್ಬಂದಿ ಹೇಳಿದ್ದಾರೆ.

ಬಂಕ್ ಸಿಬ್ಬಂದಿಯ ಮಾತಿನಿಂದ ಕುಪಿತಗೊಂಡ ಯುವಕನೋರ್ವ ಸಿಬ್ಬಂದಿ ಪ್ರದೀಪ್ ಕುಮಾರ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ಇನ್ನು ಹಲ್ಲೆಗೊಳಗಾದ ಪ್ರದೀಪ್ ಕುಮಾರ್ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

You cannot copy content from Baravanige News

Scroll to Top