ಪೊಲೀಸರನ್ನೇ ಮುಂದಿಟ್ಟುಕೊಂಡು 25,000 ಪೆನ್‌ಡ್ರೈವ್‌ ಹಂಚಿದ್ದಾರೆ: ಹೆಚ್‌ಡಿಕೆ ಬಾಂಬ್‌

ಬೆಂಗಳೂರು: ಹಾಸನ ಜಿಲ್ಲೆ ಮಾತ್ರವಲ್ಲ, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳೂ ಸೇರಿದಂತೆ ರಾಜ್ಯಾದ್ಯಂತ 25,000 ಪೆನ್‌ಡ್ರೈವ್‌ ಹಂಚಿಕೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಬಾಂಬ್‌ ಸಿಡಿಸಿದ್ದಾರೆ.

ಪ್ರಜ್ವಲ್‌ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಪತ್ರಿಕೆಗಳ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಮೊದಲ ಹಂತದ ಚುನಾವಣೆ ನಡೆಯುವ ಮುನ್ನವೇ ಹಾಸನ ಮಾತ್ರವಲ್ಲ ರಾಜ್ಯಾದ್ಯಂತ 25,000 ಪೆನ್‌ಡ್ರೈವ್‌ಗಳನ್ನ ಹಂಚಿಕೆ ಮಾಡಿದ್ದಾರೆ. ಪೊಲೀಸರನ್ನೇ ಮುಂದಿಟ್ಟುಕೊಂಡು, ಹೆದರಿಸಿ ಪೆನ್‌ಡ್ರೈವ್‌ಗಳನ್ನ ಹಂಚಿಕೆ ಮಾಡಿದ್ದಾರೆ ಎಂದು ಅವರು ದೂರಿದ್ದಾರೆ.

ನಮ್ಮ ಅಭ್ಯರ್ಥಿಯ ಪೋಲಿಂಗ್‌ ಏಜೆಂಟ್‌ ಪೂರ್ಣಚಂದ್ರ ತೇಜಸ್ವಿ ಅವರು, ಹಾಸನದ ಸೆಂಟ್‌ ಪೊಲೀಸ್‌ ಠಾಣೆಯಲ್ಲಿ ನವೀನ್‌ ಗೌಡ, ಕಾರ್ತಿಕ್‌ ಗೌಡ, ಚೇತನ್‌, ಪುಟ್ಟಿ @ ಪುಟ್ಟರಾಜು ಅನ್ನುವವರ ವಿರುದ್ಧ ಏಪ್ರಿಲ್‌ 21ರಂದೇ ದೂರು ಕೊಟ್ಟಿದ್ದಾರೆ. ಆದ್ರೆ ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದ್ದಾರೆ.

ಯಾರೇ ಆದರೂ ರಕ್ಷಿಸುವ ಮಾತೇ ಇಲ್ಲ:
ಇದೇ ವೇಳೆ ಇಂತಹ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಸಂಬಂಧಿಕನಾಗಲಿ, ಯಾರೇ ಆಗಲಿ ರಕ್ಷಣೆ ಮಾಡುವ ಮಾತೇ ಇಲ್ಲ ಎಂದೂ ಸಹ ನುಡಿದಿದ್ದಾರೆ.

ಡಿಕೆ ಶಿವಕುಮಾರ್ ಇತಿಹಾಸ ತೆಗೆದರೆ ಯಾವುದರಲ್ಲಿ ಎಕ್ಸ್‌ಪರ್ಟ್‌ ಅನ್ನೋದು ಎಲ್ಲರಿಗೆ ಗೊತ್ತಿದೆ. ರೇವಣ್ಣ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ್ದಾರಾ? ಸತ್ಯ ಎಲ್ಲವೂ ಹೊರಗೆ ಬರಲಿ. ಪೆನ್ ಡ್ರೈವ್‌ ರಿಲೀಸ್‌ ಮಾಡಿದವರ ಬಗ್ಗೆ ಮುಖ್ಯಮಂತ್ರಿ ಇನ್ನೂ ಏನು ಮಾತನಾಡುತ್ತಿಲ್ಲ ಯಾಕೆ? ಡಿಕೆಶಿವಕುಮಾರ್ ಯಾವ ತರಹ ಬಂದಿದ್ದೀರ? ನಿನ್ನೆಯ ಮೊದಲು ಹೇಳಿಕೆ, ಅಮೇಲೆ ವಿಡಿಯೋ, ಬಳಿಕ ಬೈಟ್ ಕೊಟ್ಟಿದ್ದೀರಿ. ಡಿಕೆಶಿ ನಿಮ್ಮ ಮುಖ ನೋಡಿದ್ರೆ ಗೊತ್ತಾಗುತ್ತದೆ. ಬಾಲ ಸುಟ್ಟ ಬೆಕ್ಕಿನ ರೀತಿ ಡಿಕೆ ಶಿವಕುಮಾರ್ ಮುಖ ಆಗಿತ್ತು ಎಂದು ವ್ಯಂಗ್ಯವಾಡಿದರು.

You cannot copy content from Baravanige News

Scroll to Top