Saturday, May 18, 2024
Homeಸುದ್ದಿಕರಾವಳಿಮಂಗಳೂರು-ಲಕ್ಷದ್ವೀಪ ಹಡಗು ಸಂಚಾರ ಮತ್ತೆ ಆರಂಭ : ಲಕ್ಷದ್ವೀಪದಿಂದ ಕಡಲೂರಿಗೆ ಬಂದ `ಪರೇಲಿ’ ಶಿಪ್

ಮಂಗಳೂರು-ಲಕ್ಷದ್ವೀಪ ಹಡಗು ಸಂಚಾರ ಮತ್ತೆ ಆರಂಭ : ಲಕ್ಷದ್ವೀಪದಿಂದ ಕಡಲೂರಿಗೆ ಬಂದ `ಪರೇಲಿ’ ಶಿಪ್

ಮಂಗಳೂರು ಹಾಗೂ ಲಕ್ಷದ್ವೀಪದ ನಡುವೆ ಪ್ರವಾಸಿ ಹಡಗು ಸಂಚಾರ ಮತ್ತೆ ಆರಂಭವಾಗಿದೆ. ಲಕ್ಷದ್ವೀಪದಿಂದ 150 ಮಂದಿ ಪ್ರವಾಸಿಗರನ್ನು ಹೊತ್ತ ಮೊದಲು ಹೈಸ್ಪೀಡ್ ಪ್ರವಾಸಿ ಹಡಗು, ಕಡಲೂರು ತಲುಪಿದ್ದು, ಮಂಗಳೂರಿನ ಹಳೆ ಬಂದರಿನಲ್ಲಿ ಸ್ವಾಗತಿಸಲಾಯಿತು.

ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿ ಬಳಿಕ ಲಕ್ಷದ್ವೀಪದ ಬಗ್ಗೆ ಪ್ರವಾಸಿಗರಿಗೆ ಆಸಕ್ತಿ ಮೂಡಿದೆ. ಆದರೆ ಕರ್ನಾಟಕದಿಂದ ಲಕ್ಷದ್ವೀಪಕ್ಕೆ ತೆರಳಲು ವ್ಯವಸ್ಥೆ ಇರಲಿಲ್ಲ. ಸದ್ಯ ಕರ್ನಾಟಕದಿಂದ ಲಕ್ಷದ್ವೀಪಕ್ಕೆ ತೆರಳುವ ಪ್ರವಾಸಿಗರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಮಂಗಳೂರು ಹಾಗೂ ಲಕ್ಷದ್ವೀಪದ ನಡುವೆ ಪ್ರವಾಸಿ ಹಡಗು ಸಂಚಾರ ಮತ್ತೆ ಆರಂಭವಾಗಿದೆ. ಲಕ್ಷದ್ವೀಪದಿಂದ ಪ್ರವಾಸಿಗರನ್ನು ಹೊತ್ತ ಮೊದಲ ಹಡಗು ಪರೇಲಿ ಮಂಗಳೂರು ತಲುಪಿದೆ.

ಕೋವಿಡ್ ಸಂಕಷ್ಟಕ್ಕಿಂತ ಮೊದಲು ಮಂಗಳೂರು-ಲಕ್ಷದ್ವೀಪದ ನಡುವೆ ಪ್ರಯಾಣಿಕರ ಹಡಗು ಸಂಚಾರ ನಡೆಸುತ್ತಿತ್ತು. ಆದರೆ ಕೆಲ ವರ್ಷಗಳಿಂದ ಇದು ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಹೀಗಾಗಿ ಲಕ್ಷದ್ವೀಪಕ್ಕೆ ಹೋಗಬೇಕಾದರೆ, ಕೇರಳದ ಕೊಚ್ಚಿಗೆ ಹೋಗಿ ಅಲ್ಲಿಂದ ಲಕ್ಷದ್ವೀಪಕ್ಕೆ ತೆರಳಬೇಕಾಗಿತ್ತು. ಸದ್ಯ ಪ್ರವಾಸಿ ಹಡಗು ಸಂಚಾರ ಆರಂಭ ಆಗಿದ್ದು, ಮೊದಲ ಹೈಸ್ಪೀಡ್ ಹಡಗು ಪರೇಲಿ ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದೆ. ಹಡಗಿನಲ್ಲಿ ಬಂದ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯ ಹಡಗಿನಲ್ಲಿ ಲಕ್ಷದ್ವೀಪದಿಂದ ಮಂಗಳೂರು ತಲುಪಲು ಸರಾಸರಿ 13 ಗಂಟೆ ಬೇಕಾಗಿತ್ತು. ಆದರೆ ಪರೇಲಿ ಎಂಬ ಈ ಹೈಸ್ಪೀಡ್ ಹಡಗು ಏಳು ತಾಸಿನಲ್ಲಿ ಮಂಗಳೂರು ತಲುಪಿದೆ. ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುವವರಿಗೆ ಮತ್ತೆ ಪ್ರವಾಸಿ ಹಡಗು ಸಂಚಾರ ಆರಂಭವಾಗಿರುವುದು ಖುಷಿ ತಂದಿದೆ.

ಮಂಗಳೂರು ಹಾಗೂ ಲಕ್ಷದ್ವೀಪ ನಡುವಿನ ಬಾಂಧವ್ಯವನ್ನು ಬೆಸೆಯುವ ಆಶಾದಾಯಕ ಬೆಳವಣಿಗೆ ಇದಾಗಿದ್ದು, ಇದರಿಂದ ಮಂಗಳೂರು ಹಾಗೂ ಲಕ್ಷದ್ವೀಪದ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News