Wednesday, May 29, 2024
Homeಸುದ್ದಿಕರಾವಳಿಸೆಕೆಗೆ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾವು: ಅಷ್ಟಕ್ಕೂ ಕಾರಣ ಬೇರೆಯೇ ಇದೆ

ಸೆಕೆಗೆ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾವು: ಅಷ್ಟಕ್ಕೂ ಕಾರಣ ಬೇರೆಯೇ ಇದೆ

ಉಡುಪಿ‌‌ : ಸೆಕೆಯ ಹಿನ್ನಲೆ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಮೃತಪಟ್ಟವರನ್ನು ಅಜೆಕಾರು ಆಶ್ರಯನಗರ ನಿವಾಸಿ ಸುಂದರ ನಾಯ್ಕ್ ( 55) ಎಂದು ಗುರುತಿಸಲಾಗಿದೆ.

ಸುಂದರ ನಾಯ್ಕ್ ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದರು. ಬೆಳಿಗ್ಗೆ 6:30 ವೇಳೆಗೆ ಗಮನಿಸಿದಾಗ ಟೆರೇಸ್ ಮೇಲಿಂದ ಕೆಳಗೆ ಬಿದ್ದಿರೋದು ಬೆಳಕಿಗೆ ಬಂದಿದೆ.

ಗಾಢ ನಿದ್ರೆಯಲ್ಲಿ ಆಯತಪ್ಪಿ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಇನ್ನು ನೆಚ್ಚಿನ ಶಾಲಾ ಶಿಕ್ಷಕ ಸಾವನ್ನಪ್ಪಿದ ಸಂಗತಿ ತಿಳಿದು ವಿದ್ಯಾರ್ಥಿಗಳು ಕಣ್ಣೀರು ಸುರಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News