ಮುದ್ದಿನ ಮಗಳಿಗೆ  ಶ್ರೀಮಂತ ವರನನ್ನು ಹುಡುಕಲು 3 ಲಕ್ಷ ರೂ. ಖರ್ಚು ಮಾಡಿದ ತಂದೆ..!

ಒಳ್ಳೆಯ ಮನೆತನ, ಸಂಸ್ಕಾರವಂತ ಹುಡುಗನನ್ನು ನೋಡಿ ಮಗಳಿಗೆ ಮದುವೆ ಮಾಡಬೇಕೆನ್ನುವುದು ಪ್ರತಿಯೊಬ್ಬ ತಂದೆಯ ಕನಸು. ತನ್ನ ಮನೆ ಬೆಳಗಿ ಇನ್ನೊಂದು ಮನೆಯ ದೀಪವಾಗಿ ಹೋಗುವ ಮಗಳಿಗೆ ತಕ್ಕ ವರನನ್ನು ಹುಡುಕಿ ಅದ್ಧೂರಿಯಾಗಿ ಮದುವೆ ಮಾಡಿ ಕಳಿಸಿಕೊಡಬೇಕೆನ್ನುವುದು ಪ್ರತೀ ತಂದೆಯ ಹಂಬಲ. ಇದಕ್ಕಾಗಿ ಪ್ರತಿಯೊಬ್ಬ ತಂದೆಯೂ ತನ್ನ ಕೈಲಾಗುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದ್ರೆ ಇಲ್ಲೊಬ್ಬರು ತಂದೆ ಮಾತ್ರ ತನ್ನ ಮುದ್ದಿನ ಮಗಳಿಗೆ 200 ಕೋಟಿಗೂ ಅಧಿಕ ವಹಿವಾಟು ಹೊಂದಿರುವ ಆಗರ್ಭ ಶ್ರೀಮಂತ ಕುಟುಂಬದ ವರನೇಬೇಕೆಂದು ಹುಡುಗನನ್ನು ಹುಡುಕಲು ಮ್ಯಾಚ್ ಮೇಕಿಂಗ್ ಏಜನ್ಸಿಯೊಂದಕ್ಕೆ ಬರೋಬ್ಬರಿ 3 ಲಕ್ಷ ರೂ. ಗಳನ್ನು ಪಾವತಿಸಿದ್ದಾರೆ.

ಈ  ಕುರಿತ ಪೋಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಪೋಸ್ಟ್ ಅನ್ನು ಮಿಶ್ಕಾ ರಾಣಾ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ಸ್ನೇಹಿತೆಯ ತಂದೆ ಆಕೆಗೆ 200 ಕೋಟಿಗೂ ಅಧಿಕ ವಹಿವಾಟನ್ನು ಹೊಂದಿರುವ ಕುಟುಂಬದ ವರನನ್ನು ಹುಡುಕಲು 3 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ ; ನೀವ್ಯಾರಾದರೂ ಆಕೆಯನ್ನು ಮದುವೆಯಾಗಲು ಬಯಸುವಿರಾ” ಎಂಬ ಬರಹವನ್ನು ಬರೆದುಕೊಂಡಿದ್ದಾರೆ.

ಏಪ್ರಿಲ್ 26 ರಂದು ಹಂಚಿಕೊಂಡ ಈ ಪೋಸ್ಟ್ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ಪೋಸ್ಟ್ ನೋಡಿ ಅಯ್ಯೋ ದೇವ್ರೆ ವರನನ್ನು ಹುಡುಕಲು ಇಷ್ಟೆಲ್ಲಾ ಖರ್ಚು ಮಾಡೋದಾ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ.

You cannot copy content from Baravanige News

Scroll to Top