Wednesday, May 29, 2024
Homeಸುದ್ದಿಇನ್ಸ್ಟಾದಲ್ಲಿ ಪರಿಚಯ; ಮಲಗಲು ಬಂದು ಕೊಂದೇ ಬಿಟ್ಟ; ಅಕ್ರಮ ಸಂಬಂಧಕ್ಕೆ ಆಂಟಿ ಬಲಿ...!

ಇನ್ಸ್ಟಾದಲ್ಲಿ ಪರಿಚಯ; ಮಲಗಲು ಬಂದು ಕೊಂದೇ ಬಿಟ್ಟ; ಅಕ್ರಮ ಸಂಬಂಧಕ್ಕೆ ಆಂಟಿ ಬಲಿ…!

ಬೆಂಗಳೂರು: ಕೊಡಿಗೇಹಳ್ಳಿ ಮನೆಯಲ್ಲಿ ನಡೆದ ಒಂಟಿ ಮಹಿಳೆಯ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಆಕೆಯ ಮನೆಗೆ ಬಂದವನು ಮಂಚದಲ್ಲಿ ಮಲಗಿದ್ದವಳನ್ನ ಹತ್ಯೆ ಮಾಡಿದ್ದಾನೆ. ಆದ್ರೆ, ಅಲ್ಲಿ ಕಾಣ್ತಿದ್ದ ನಗ್ನತೆಯ ಚಿತ್ರಣ ಬೇರೆಯದ್ದೇ ಕಥೆ ಹೇಳ್ತಿತ್ತು. ಹಾಗಾದ್ರೆ, ಆ ಹಂತಕ ಯಾರು..!? ಕಳ್ಳಾನೋ.!? ಪರಿಚಯಸ್ಥನೋ.!? ಈ ಪ್ರಶ್ನೆಗಳಿಗೆ ಸಿಕ್ಕ ಉತ್ತರ ರೋಚಕವಾಗಿದೆ.

ಕಳೆದ ಏಪ್ರಿಲ್‌​ 19ರ ಮಧ್ಯರಾತ್ರಿ 2.30ಕ್ಕೆ ಇಡೀ ನಗರವೇ ಗಾಢ ನಿದ್ರೆಗೆ ಜಾರಿತ್ತು. ಆದ್ರೆ ಶೋಭಾ ಎನ್ನುವವರ ಮನೆಯ ಬೆಡ್​ರೂಂನಲ್ಲಿ ಮಾತ್ರ ರಕ್ತದೋಕುಳಿ ಹರಿದಿತ್ತು. ಈ ಮನೆ ಯಜಮಾನಿಯ ನೆತ್ತರು ನೆಲಕ್ಕೆ ಚಿಮ್ಮಿತ್ತು. ಆ ನೆತ್ತರಿನ ಕಥೆಯಲ್ಲಿ ನಗ್ನತೆಯ ಕ್ರೂರತೆಗೂ ಸಾಕ್ಷಿಯಾಗಿತ್ತು.

ಮಹಿಳೆಯ ಹೆಸರು ಶೋಭಾ.. ಡ್ರೈವಿಂಗ್​ ಸ್ಕೂಲ್​ ಒಂದರ ಮುಖ್ಯಸ್ಥೆ. ಇಬ್ಬರು ಹೆಣ್ಣು ಮಕ್ಕಳ ತಾಯಿ.. ಕೊಡಿಗೆಹಳ್ಳಿಯ ಭದ್ರಪ್ಪ ಲೇಔಟ್​​ನಲ್ಲ್ಲಿರೋ ನಿವಾಸದಲ್ಲಿದ್ದ ಮಹಿಳೆ ಭೀಕರವಾಗಿ ಕೊಲೆಯಾಗಿದ್ರು. ಆದ್ರೆ, ಶಾಕಿಂಗ್​ ವಿಷಯ ಏನಂದ್ರೆ, ಮಂಚದ ಮೇಲೆಯೇ ಕೊಲೆಯಾಗಿದ್ದ ಶೋಭ ಮೃತದೇಹ ನಗ್ನವಾಗಿ ಸಿಕ್ಕಿತ್ತು. ಇದು ಪೊಲೀಸರ ನಿದ್ದೆಗೆಡಿಸಿತ್ತು.

ಕೊಡಿಗೆಹಳ್ಳಿ ‘ಶೋಭಾ’ ಕೊಲೆಯಾಗಿದ್ದೇಗೆ?

ಶೋಭಾ ಎಂಬ ಮಹಿಳೆ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ರು. ಹೀಗಾಗಿ, ಮನೆಯಲ್ಲಿ ಒಬ್ಬರೇ ವಾಸವಾಗಿದ್ರು. ತಾಯಿ ಶೋಭಾಗೆ ಹರ್ಷಿತಾ ಕರೆ ಮಾಡಿದ್ರು. ಈ ವೇಳೆ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ನಂತರ ಅಕ್ಕ ಸುಪ್ರಿಯಾ​ಗೆ ಕರೆ ಮಾಡಿ ಫೋನ್ ಸ್ವಿಚ್ಡ್ ಆಫ್ ಆಗಿರೋ ವಿಚಾರ ಹೇಳಿದ್ದರು. ರಾತ್ರಿ ದೊಡ್ಡ ಮಗಳು ಸುಪ್ರಿಯಾ ಮನೆ ಬಳಿ ಬಂದು ಚೆಕ್ ಮಾಡ್ದಾಗ ಕೊಲೆಯಾಗಿರೋ ವಿಚಾರ ಬೆಳಕಿಗೆ ಬಂದಿದೆ. ಶೋಭಾ ಮೃತದೇಹ ನಗ್ನವಾಗಿ ಪತ್ತೆಯಾಗಿದೆ.

ಈ ನಗ್ನತೆಯ ರಹಸ್ಯದ ಹಿಂದೆ ಬಿದಿದ್ದ ಕೊಡಿಗೆಹಳ್ಳಿ ಪೊಲೀಸರು ಆರೋಪಿ ನವೀನ್​ನನ್ನ ಹೆಡೆಮುರಿ ಕಟ್ಟಿದ್ದಾರೆ. ಮೊದ ಮೊದಲು ಕಳ್ಳತನದ ವಾಸನೆ ಮೂಡಿದ್ದ ಈ ಕೊಲೆಯ ಹಿಂದಿನ ಭಯಾನಕ ರಹಸ್ಯವನ್ನೂ ಬೇಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿ ಹಲವು ವಿಚಾರಗಳನ್ನ ಬಾಯಿಬಿಟ್ಟಿದ್ದಾನೆ.

ನವೀನ್ ಪೊಲೀಸರಿಗೆ ಹೇಳಿದ್ದೇನು?

ಸರ್​.. ನಾನು ಶೋಭಾ ಇನ್ಸ್​ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ವಿ. ನಾನು ಅವಾಗವಾಗ ಅವಳ ಮನೆಗೆ ಹೋಗ್ತಿದ್ದೆ. ನಮ್ಮಿಬ್ಬರ ಮಧ್ಯೆ ಅನೈತಿಕ ಸಂಬಂಧ ಇತ್ತು. ಅವಳ ಮನೆಗೆ ಹೋಗಿದ್ದಾಗ ಅವಳು ಅತಿಯಾದ ಸೆಕ್ಸ್​ಗೆ ಒತ್ತಾಯಿಸಿದ್ಲು. ನನಗೆ ತುಂಬಾ ಬೇಜಾರ್​ ಆಗ್ತಿತ್ತು. ಹೀಗಾಗಿ, ಕೊಲೆ ಮಾಡ್ಬಿಟ್ಟೆ ಸರ್ ಎಂದು ಪೊಲೀಸರಿಗೆ ಹೇಳಿದ್ದಾನೆ.

ಆ ದಿನ ರಾತ್ರಿ ನವೀನ್​ ಸುಮಾರು 9:30ವರೆಗೆ ಶೋಭಾ ಮನೆಗೆ ಬಂದಿದ್ದಾನೆ. ಬಳಿಕ ಒಟ್ಟಿಗೆ ಕಾರಿನಲ್ಲಿ ಸ್ವಲ್ಪ ದೂರ ತೆರಳಿ ಊಟ ತಂದಿದ್ದಾರೆ. ಊಟ ಮಾಡಿದ ಬಳಿಕ ಫಸ್ಟ್ ಫ್ಲೋರ್​ನಲ್ಲಿ ನವೀನ್ ಮಲಗಿದ್ರೆ, ಶೋಭಾ ತಳಮಹಡಿಯಲ್ಲಿ ಮಲೆಗಿದ್ದಾಳೆ. ಬಳಿಕ ಪರಸ್ಪರ ಜಗಳವಾಗಿದ್ದು, ಮಂಚದ ಮೇಲೆಯೇ ಶೋಭಾ ಹತ್ಯೆಯಾಗಿದೆ.

ನವೀನ್ ಕೊಲೆ ಮಾಡಿದ್ದು ಮಾತ್ರವಲ್ಲ ಆಕೆ ಧರಿಸಿದ್ದ ಚೈನ್, ಮೊಬೈಲ್, ಎಟಿಎಂ ಕಾರ್ಡ್​ ಹಾಗೂ ಕಾರನ್ನೂ ಕದ್ದು ಕಾಲ್ಕಿತ್ತಿದ್ದ. ಇದೀಗ ಬನಶಂಕರಿ ಮೂಲದ ಆರೋಪಿ ನವೀನ್​ನನ್ನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News