ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಬಹುಭಾಷಾ ನಟ ಸಯಾಜಿ ಶಿಂಧೆ

ಬಹುಭಾಷಾ ನಟ ಸಯಾಜಿ ಶಿಂಧೆ ತೀವ್ರ ಎದೆಯ ನೋವಿನಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಸಯಾಜಿರನ್ನು ದಾಖಲಿಸಿದ್ದಾರೆ. ನಟನಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಇಂದು (ಏ.12) ಬೆಳಿಗ್ಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ. ಆ ಕೂಡಲೇ ಆಸ್ಪತ್ರೆಯ ಸಯಾಜಿರನ್ನು ದಾಖಲಿಸಿದ್ದಾರೆ. ಈ ವೇಳೆ, ಹೃದಯದಲ್ಲಿ ರಕ್ತವನ್ನು ಪೂರೈಸುವ ನಾಳಗಳಲ್ಲಿ ಬ್ಲಾಕ್ ಇರುವುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಸ್ವಲ್ಪ ಸಮಯದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.

ನಟ ಸಯಾಜಿ ಶಿಂಧೆ ಅವರು ಬಹುಭಾಷಾ ನಟನಾಗಿ ಸೈ ಎನಿಸಿಕೊಂಡಿದ್ದಾರೆ. ತೆಲುಗು, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದ ಶಕ್ತಿ ಸಿನಿಮಾದಲ್ಲಿ ಮಾಲಾಶ್ರೀಗೆ ವಿಲನ್ ಆಗಿ ಅಬ್ಬರಿಸಿದ್ದರು. ವೀರಕನ್ನಡಿಗ ಚಿತ್ರದಲ್ಲಿಯೂ ವಿಲನ್‌ ಆಗಿ ನಟಿಸಿದ್ದರು.

You cannot copy content from Baravanige News

Scroll to Top