Friday, March 29, 2024
Homeಸುದ್ದಿರಾಜ್ಯಪತ್ನಿಗೆ ತನ್ನ ಪ್ರೇಯಸಿ ಜೊತೆಗಿನ ಫೋಟೋ ಕಳುಹಿಸಿದ ಗಂಡ: ಮನನೊಂದ ಹೆಂಡತಿ ಆತ್ಮಹತ್ಯೆ!

ಪತ್ನಿಗೆ ತನ್ನ ಪ್ರೇಯಸಿ ಜೊತೆಗಿನ ಫೋಟೋ ಕಳುಹಿಸಿದ ಗಂಡ: ಮನನೊಂದ ಹೆಂಡತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ : 8 ತಿಂಗಳ ಹಿಂದೆಯಷ್ಟೇ ಸಪ್ತಪದಿ ತುಳಿದಿದ್ದ ಮಹಿಳೆ ತನ್ನ ಗಂಡ ಪರ ಸ್ತ್ರೀ ಜೊತೆ ಮೋಜು, ಮಸ್ತಿಯಲ್ಲಿ ಸುತ್ತಾಡಿದ್ದ ಪೋಟೋಗಳನ್ನು ನೋಡಿ ತೀವ್ರ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಹೆಣ್ಣೂರು ಕದಿರೇನಹಳ್ಳಿಯಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಹೆಣ್ಣೂರು ಕದಿರೇನಹಳ್ಳಿ ಗ್ರಾಮದ 20 ವರ್ಷದ ಮೌನಿಕಾ ಎಂದು ಗುರುತಿಸಲಾಗಿದೆ.

ವಿಜಯದಶಮಿ ಹಿನ್ನೆಲೆಯಲ್ಲಿ ಮೌನಿಕಳನ್ನು ಪತಿ ಭಾರ್ಗವ ತವರು ಮನೆಗೆ ಕಳುಹಿಸಿದ್ದ. ಈ ವೇಳೆ ಭಾರ್ಗವ್‌ ತನ್ನ ಪ್ರೇಯಸಿ ಜೊತೆ ಪ್ರವಾಸ ಹೋಗಿದ್ದಾನೆ. ಸಾಲದಿದ್ದಕ್ಕೆ ಪ್ರೇಯಸಿ ಜೊತೆ ಮೋಜು, ಮಸ್ತಿಯಲ್ಲಿ ಸುತ್ತಾಡಿರುವ ಪೋಟೋ, ವಿಡಿಯೋಗಳನ್ನು ತವರು ಮನೆಯಲ್ಲಿದ್ದ ಪತ್ನಿ ಮೋನಿಕಾ ಮೊಬೈಲ್‌ಗೆ ರವಾನಿಸಿದ್ದಾನೆ. ಇದನ್ನು ನೋಡಿದ ಮೋನಿಕಾ ತವರು ಮನೆಯಲ್ಲಿಯೆ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ತನ್ನ ಗಂಡನೆ ಕಾರಣ ಅಂತ ಡೆತ್‌ ನೋಟ್‌ ಸಹ ಬರೆದಿಟ್ಟಿದ್ದಾಳೆ.

ಮೋನಿಕಾ ತಂದೆ ತಾಯಿ ಬಡವರಾದರು ಕಷ್ಟಪಟ್ಟು ಆಕೆಯನ್ನು ಪದವಿವರೆಗೂ ಓದಿಸಿದ್ದರು. ಚಿಕ್ಕಬಳ್ಳಾಪುರ ನಗರ ಪ್ರಶಾಂತ್‌ ನಗರ ನಿವಾಸಿ 25 ವರ್ಷದ ಭಾರ್ಗವ್‌ ಕೊಟ್ಟು ಕಳೆದ 8 ತಿಂಗಳ ಹಿಂದೆಯಷ್ಟೇ ಅದ್ದೂರಿಯಾಗಿ ವಿವಾಹ ಮಾಡಿದ್ದರು. ಆದರೆ ಆತ ಮತ್ತೊಬ್ಬ ಯುವತಿಯನ್ನು ಪ್ರೇಮಿಸುತ್ತಿರುವ ಪೋಟೋಗಳನ್ನು ನೋಡಿ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷಯ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News