Saturday, July 27, 2024
Homeಸುದ್ದಿಕರಾವಳಿಉಡುಪಿ : ನಾಪತ್ತೆಯಾಗಿದ್ದ ಆಟೋ ಚಾಲಕ ಮುಹಮ್ಮದ್ ಫೈಝಲ್ ಮೃತದೇಹ ಪತ್ತೆ

ಉಡುಪಿ : ನಾಪತ್ತೆಯಾಗಿದ್ದ ಆಟೋ ಚಾಲಕ ಮುಹಮ್ಮದ್ ಫೈಝಲ್ ಮೃತದೇಹ ಪತ್ತೆ

ಉಡುಪಿ : ನಾಪತ್ತೆಯಾಗಿದ್ದ ಆಟೋರಿಕ್ಷಾ ಚಾಲಕ ಮಹಮ್ಮದ್ ಫೈಝಲ್ ಮೃತದೇಹ ಬ್ರಹ್ಮಾವರ ಉಪ್ಪೂರು ಮಾಯಾಡಿ ಎಂಬಲ್ಲಿರುವ ಸ್ವರ್ಣಾ ನದಿಯಲ್ಲಿ ಪತ್ತೆಯಾಗಿದೆ.

ಮೂಡು ತೋನ್ಸೆ ಗ್ರಾಮದ ಮುಹಮ್ಮದ್ ಫೈಝಲ್(36) ಎಂಬುವವರು ಮಾರ್ಚ್ 27ರಂದು ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಮನೆಯಿಂದ ಹೊರಟವರು ಬಳಿಕ ನಾಪತ್ತೆಯಾಗಿದ್ದರು. ನಂತರ ಅವರಿಗಾಗಿ ಹುಡುಕಾಟ ನಡೆಸಿದಾಗ ಮನೆ ಬಳಿಯ ಮೈದಾನದ ಸಮೀಪ ಪತ್ತೆಯಾಗಿತ್ತು. ಬಳಿಕ ಮುಹಮ್ಮದ್ ಫೈಝಲ್ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮುಹಮ್ಮದ್ ಫೈಝಲ್ ಅವರ ಮೃತದೇಹವು ಸ್ವರ್ಣಾ ನದಿಯಲ್ಲಿ ಪತ್ತೆಯಾಗಿದೆ. ಇನ್ನು ಅವರ ಸಾವಿನ ಕುರಿತು ಹಲವಾರು ಸಂಶಯವಿರುವುದಾಗಿ ನೀಡಿರುವ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News