ಬ್ರಹ್ಮಾವರ : ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾದ ಘಟನೆ ಬ್ರಹ್ಮಾವರ ಆಕಾಶವಾಣಿ ವೃತ್ತದ ಬಳಿ ನಡೆದಿದೆ.
ಎಲೆಕ್ಟ್ರಿಕ್ ವಾಹನ ಚಲಿಸುತ್ತಿದ್ದಾಗಲೇ ಬೆಂಕಿ ಕಾಣಿಸಿಕೊಂಡಿತ್ತು. ಅದನ್ನು ಆಕಾಶವಾಣಿ ವೃತ್ತದ ಬಳಿ ನಿಲ್ಲಿಸಿದಾಗ ಬೆಂಕಿ ಇನ್ನಷ್ಟು ಹೆಚ್ಚಾಗಿದೆ.
ಕೂಡಲೇ ಸ್ಥಳೀಯರು ಜಮಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ನೀರು, ಮಣ್ಣು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ, ಇಲೆಕ್ಟ್ರಿಕ್ ವಾಹನ ಸಂಪೂರ್ಣ ಹೊತ್ತಿ ಉರಿದು ಬೆಂಕಿಗೆ ಆಹುತಿ ಆಗಿದೆ.